ಪ್ರಸ್ತುತದಲ್ಲಿ ಇನ್ಸ್ಟೆಂಟ್ ಮೆಸೇಜಿಂಗ್ ನಮ್ಮ ಬಹುಪಾಲು ಸಂವಹನದ ನೆಚ್ಚಿನ ಸಾಧನವಾಗಿ ವಿಕಸನವಾಗಿದೆ. ವೇಗವಾಗಿ ಮತ್ತು ಸುಲಭವಾಗಿ ಸಂವಹನ ಮಾಡುವ ಇದರ ಸಾಮರ್ಥ್ಯವು, ವ್ಯವಹಾರ ಮತ್ತು ವೈಯಕ್ತಿಕ ಸಂವಹನಗಳಿಗೆ ಸೂಕ್ತವಾದ ಮಾಧ್ಯಮವನ್ನಾಗಿ ಮಾಡಿದೆ. ದುರದೃಷ್ಟವಶಾತ್, ಆನ್ಲೈನ್ ಸಂವಹನದ ಇತರ ವಿಧಾನಗಳಂತೆಯೇ ಇನ್ಸ್ಟೆಂಟ್ ಮೆಸೇಜಿಂಗ್ ನಲ್ಲೂ ಸಹ ಬೆದರಿಕೆಗಳಿವೆ. ಈ ಅಪ್ಲಿಕೇಶನ್ಗಳು ಬಳಕೆದಾರರೊಂದಿಗೆ ದೊಡ್ಡ ಹಿಟ್ ಆಗಿರುವ ಮುಖ್ಯ ಕಾರಣವೆಂದರೆ ಅವುಗಳನ್ನು ಸುಲಭವಾಗಿ ಬಳಸಬಹುದಾಗಿರುತ್ತದೆ ಮತ್ತು ಅದಲ್ಲದೆ ಮುಖ್ಯವಾಗಿ ಉಚಿತವಾಗಿರುತ್ತದೆ. ಕೆಲವು ಇನ್ಸ್ಟಂಟ್ ಮೆಸೆಂಜರ್ ಗಳೆಂದರೆ ವಾಟ್ಸಾಪ್, ಸ್ನಾಪ್ಚಾಟ್, ವೈಬರ್ , ವಿ ಚಾಟ್ ಮತ್ತು ಇನ್ನೂ ಹಲವು.
ಮೊಬೈಲ್ ಇನ್ಸ್ಟೆಂಟ್ ಮೆಸೇಜಿಂಗ್ನಲ್ಲಿನ ಅಪಾಯಗಳು
ಇಂದಿನ ಜಗತ್ತಿನಲ್ಲಿ ಮಹಿಳೆಯರ ಜೀವನದ ಎಲ್ಲ ಅಂಶಗಳಲ್ಲೂ ಪ್ರಮುಖರಾಗಿದ್ದಾರೆ. ಈ ಸಮಕಾಲೀನ ಜಗತ್ತಿನಲ್ಲಿ ಇದು ಅಸ್ತಿತ್ವದಲ್ಲಿರುವ ಪರಿಸ್ಥಿತಿಯಾಗಿದ್ದರೂ, ಈಗಲೂ ಬಲಿಯಾಗುವವರು, ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನೋವು ಮತ್ತು ನಷ್ಟವನ್ನು ಅನುಭವಿಸುತ್ತಿರುವವರು ಮಹಿಳೆಯರಾಗಿದ್ದಾರೆ. ಅಂತರ್ಜಾಲದ ಬೆಳವಣಿಗೆ ಮತ್ತು ವಿವಿಧ ಸಾಧನಗಳ ಮೂಲಕ ತ್ವರಿತವಾಗಿ ಹರಡುವಿಕೆ ಹೊಸ ಅವಕಾಶಗಳನ್ನು ನೀಡಿವೆಯಾದರೂ, ಕೆಲವು ಮಹಿಳೆಯರನ್ನು ಅಪಾಯಕ್ಕೆ ಒಳಪಡಿಸುವ ಅಪಾಯಗಳನ್ನೂ ತಂದೊದಗಿಸಿವೆ. ಮಹಿಳೆಯರ ವಿರುದ್ಧದ ಸೈಬರ್ ಬೆದರಿಕೆಗಳು, ಅವರನ್ನು ಸುರಕ್ಷಿತವಾಗಿಡಲು ಮಾರ್ಗಗಳನ್ನು ಅನ್ವೇಷಿಸಲು ನಮಗೆ ಸಹಾಯಮಾಡುತ್ತದೆ.
ಇನ್ಸ್ಟೆಂಟ್ ಮೆಸೆಂಜರ್ಗಳನ್ನು ಬಳಸುವಾಗಿನ ಜೊತೆಯ ಕೆಲವು ಅಪಾಯಗಳನ್ನು ಮತ್ತು ಈ ಅಪಾಯಗಳನ್ನು ನಾವು ಹೇಗೆ ತಪ್ಪಿಸಬಹುದು ಎಂಬುದನ್ನು ನೋಡೋಣ.
- ಸೂಕ್ಷ್ಮ ಮಾಹಿತಿಯ ಸೋರಿಕೆ:
ಬಹಳಷ್ಟು ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಷನ್ಗಳಲ್ಲಿ ಖಾಸಗಿ ಮಾಹಿತಿಯನ್ನು ಬಹಿರಂಗಗೊಳಿಸುವುದು ಸುಲಭವಾಗಿರುತ್ತದೆ ಮತ್ತು ಅದನ್ನು ಮೋಸದ ಉದ್ದೇಶಗಳಿಗಾಗಿ ಬಳಸಬಹುದು. ಇವುಗಳಲ್ಲಿ ಹೆಚ್ಚಿನವು ವ್ಯಕ್ತಿಯ ಪ್ರೊಫೈಲ್ ಚಿತ್ರದೊಂದಿಗೆ ಸಂಬಂಧ ಹೊಂದಿರುತ್ತವೆ. ನಿಮ್ಮ ಫೋನ್ ಸಂಖ್ಯೆಯನ್ನು ಹೊಂದಿರುವ ಯಾರೊಬ್ಬರೂ ಇದನ್ನು ವೀಕ್ಷಿಸಬಹುದು ಮತ್ತು ಅದನ್ನು ಪಡೆಯಬಹುದಾಗಿರುತ್ತದೆ. ಆದ್ದರಿಂದ ಇದು ಮಹಿಳೆಯರ ಗೌಪ್ಯತೆಗೆ ಒಂದು ಪ್ರಮುಖ ಬೆದರಿಕೆಯನ್ನು ಉಂಟುಮಾಡುತ್ತದೆ ಮತ್ತು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿರುತ್ತದೆ. ಈ ಸೌಲಭ್ಯವನ್ನು ಮಹಿಳೆಯರು ಸುರಕ್ಷಿತವಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಮಾರ್ಗಗಳನ್ನು ಅನ್ವೇಷಿಸುವ ಅಗತ್ಯವಿದೆ. ಸೈಬರ್ ಸ್ಪೆಸಿನಲ್ಲಿ, ಮಹಿಳಾ ಸುರಕ್ಷತೆಯು ಅತ್ಯುತ್ಕೃಷ್ಟವಾಗಿದೆ.
ಭದ್ರತಾ ಸೆಟ್ಟಿಂಗ್ಗಳನ್ನು ಪರಿಶೀಲಿಸಿ, ನಿಮ್ಮ ಪ್ರೊಫೈಲ್ ಫೋಟೋವನ್ನು ಪ್ರತಿಯೊಬ್ಬರು ವೀಕ್ಷಿಸುವ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ ಯಾವಾಗಲೂ ಸಲಹೆ ನೀಡಲಾಗುತ್ತದೆ.
ಮಾಹಿತಿ ಪ್ರಕಟಣೆ - ಎ ಕೇಸ್ ಸ್ಟಡಿ
ಎಲ್ಲಾ ಇನ್ಸ್ಟಂಟ್ ಮೆಸೇಜಿಂಗ್ ಗಳು ಎಲ್ಲಾ ಸಂವಹನಗಳನ್ನು ಲಾಗ್-ಫೈಲ್ಗಳಲ್ಲಿ ದಾಖಲಿಸಲು ಅನುಮತಿಸುತ್ತದೆ. ಈ ದಾಖಲೆಗಳು ಸೂಕ್ಷ್ಮ ಡೇಟಾವನ್ನು ಒಳಗೊಂಡಿರಬಹುದು. ಕಂಪೆನಿಯ ಸಿ ಇ ಓ ನ ಲಾಗ್ಗಳನ್ನು ಹ್ಯಾಕರ್ ಕದಿಯುವ ಒಂದು ಪ್ರಕರಣ ವರದಿಯಾಗಿದೆ. ವೆಬ್ನಲ್ಲಿ ಹಲವಾರು ಸ್ಥಳಗಳಿಗೆ ಹ್ಯಾಕರ್ ಈ ಸಂವಹನಗಳನ್ನು ಪೋಸ್ಟ್ ಮಾಡಿದ. ಇದರಿಂದಾಗಿ ಸಂಭಾವ್ಯ ಕೆಟ್ಟ ಸಾಂಸ್ಥಿಕ ದುಃಸ್ವಪ್ನವು ಸೃಷ್ಟಿಯಾಯಿತು. ಈ ದಾಖಲೆಗಳು ವ್ಯವಹಾರದ ಪಾಲುದಾರರು, ಉದ್ಯೋಗಿಗಳು ಮತ್ತು ಅಂಗಸಂಸ್ಥೆ ವೆಬ್ಸೈಟ್ಗಳ ಬಗೆಗಿನ ಸೂಕ್ಷ್ಮ ಕಂಪನಿ ಡೇಟಾವನ್ನು ಒಳಗೊಂಡಿತ್ತು. ದಾಖಲೆಗಳನ್ನು ಪೋಸ್ಟ್ ಮಾಡಿದ ನಂತರ, ಕಂಪನಿಯ ಹಿರಿಯ ಸಿಬ್ಬಂದಿಗಳ ಹಲವಾರು ಸದಸ್ಯರು ರಾಜೀನಾಮೆ ನೀಡಿದರು.
ಹ್ಯಾಕರ್ ತ್ವರಿತ ಸಂದೇಶದ ಅವಧಿಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾದರೆ ಅದು ಎಷ್ಟು ಅಪಾಯಕಾರಿಯಾಗಿರುತ್ತದೆ ಎಂದು ಈ ಸಂದರ್ಭವು ತೋರಿಸುತ್ತದೆ. ಲಾಗ್-ಫೈಲ್ಗಳನ್ನು ಈ ಸಂದರ್ಭದಲ್ಲಿ ಕದ್ದಿದ್ದರೂ, ಡಾಟಾ-ಪ್ಯಾಕೆಟ್ಗಳನ್ನು ಸ್ನಿಫಿಂಗ್ ಮಾಡುವುದರಿಂದ ಅದೇ ಹಾನಿ ಉಂಟಾಗುತ್ತದೆ.
https://www.symantec.com/connect/articles/instant-insecurity-security-issues-instant-messaging
- ಕಣ್ಗಾವಲು / ಟ್ರ್ಯಾಕಿಂಗ್:
ಲೈವ್ ಲೋಕೇಶನ್ (ವರ್ತಮಾನಿಕ ಸ್ಥಳ) ಅನ್ನು ಹಂಚಿಕೊಳ್ಳುವ ಮೂಲಕ ಸ್ಥಳವನ್ನು ಹಂಚಿಕೊಳ್ಳುವುದು ಮಹಿಳೆಯರಿಗೆ ಸಂಭವಿಸಬಹುದಾದ ಗಂಭೀರ ಅಪಾಯವಾಗಿದೆ. ನಿಮ್ಮ ಸಂಖ್ಯೆಯನ್ನು ತಿಳಿದಿರುವ ಯಾವುದೇ ಅಪರಾಧಿಯು ನಿಮ್ಮ ಸಾಮಾನ್ಯ ವಾಡಿಕೆಯ ಪ್ರಯಾಣವನ್ನು ಗುರುತಿಸಲು ಮತ್ತು ಅಕ್ರಮ ಚಟುವಟಿಕೆಗಳನ್ನು ಯೋಜಿಸಲು ಸ್ಥಳ ಸೇವೆಗಳ ಸಹಾಯವನ್ನು ಪಡೆದು ಪತ್ತೆಹಚ್ಚಬಹುದು.
ನಿಮಗೆ ತಿಳಿದಿರುವ ಜನರೊಂದಿಗೆ ಮಾತ್ರ ಸ್ಥಳ ಸೇವೆಗಳನ್ನು ಬಳಸಿ ಮತ್ತು ಅಪರಿಚಿತರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ
- ಹ್ಯಾಕಿಂಗ್:
ವೈಯಕ್ತಿಕ ಮಾಹಿತಿಯನ್ನು ವರ್ಗಾವಣೆ ಮಾಡುವ ಮತ್ತು ಸಂಗ್ರಹಿಸಲ್ಪಡುವ ವಿಧಾನದ ಬಗ್ಗೆ ಸ್ಮಾರ್ಟ್ ಫೋನಿನ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ಗಳನ್ನು ಪರಿಶೀಲಿಸಲಾಗಿದೆ. ಇನ್ಸ್ಟೆಂಟ್ ಮೆಸೇಜಿಂಗ್ನಲ್ಲಿನ ಮಾರುಕಟ್ಟೆ ಮುಖಂಡ ಎನಿಸಿರುವ ಒಂದು ಆಪ್, ವಿಳಾಸದ ವಿವರಗಳು ಮತ್ತು ವಯಕ್ತಿಕ ಮಾಹಿತಿಯನ್ನು ಅಪ್ಲಿಕೇಶನಿನ ಸರ್ವರ್ ಗೆ ಗೂಢಲಿಪೀಕರಣ ಮಾಡದೆ ವರ್ಗಾವಣೆ ಮಾಡಿದೆ ಎಂದು ಆರೋಪಿಸಲಾಗಿದೆ. ಮೂರನೆಯ ವ್ಯಕ್ತಿಗಳು ನೋಡಲು ಮತ್ತು ಬಳಸಿಕೊಳ್ಳಲು ಸುಲಭವಾಗುವಂತೆ ಐ ಡಿ ಯನ್ನು ಒಳಗೊಂಡಂತೆ ಹಲವಾರು ಖಾಸಗಿ ಮಾಹಿತಿಗಳು ಲಭ್ಯವಿದೆ.
ಇತರ ಜನರ ಇನ್ಸ್ಟೆಂಟ್ ಮೆಸೇಜಿಂಗ್ ಸಂಭಾಷಣೆಗಳನ್ನು ಮತ್ತು ವೈಯಕ್ತಿಕ ಮಾಹಿತಿಯನ್ನು ಪಡೆಯಲು ಕೆಲವು ಅಪ್ಲಿಕೇಷನ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ನೀವು ಆಯ್ಕೆ ಮಾಡಿದ ಅಪ್ಲಿಕೇಶನ್ಗಳು ಎಲ್ಲಾ ಮಾಹಿತಿಯನ್ನು ಗೂಢಲಿಪೀಕರಣ ಮಾಡಿದ ರೂಪದಲ್ಲಿ ಸರ್ವರ್ ಗೆ ವರ್ಗಾಯಿಸುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಸೋಗು ಹಾಕುವಿಕೆ:
ಹ್ಯಾಕರ್ಗಳಿಗೆ ಆನ್ಲೈನ್ನಲ್ಲಿ ಸಾಕಷ್ಟು ಹೆಚ್ಚಿನ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಅವಕಾಶವಿದೆ. ಇನ್ಸ್ಟೆಂಟ್ ಮೆಸೇಜಿಂಗ್ ಮೂಲಕ ಪಾಸ್ವರ್ಡ್ಗಳು, ಸಿಸ್ಟಮ್ ಕಾನ್ಫಿಗರೇಶನ್ ಮಾಹಿತಿ ಮತ್ತು ಸೂಕ್ಷ್ಮ ಫೈಲ್ಗಳನ್ನು ಹ್ಯಾಕರ್ ಪಡೆಯಬಹುದು. ಹ್ಯಾಕರ್ಸ್ ಇತರ ಬಳಕೆದಾರರಂತೆ ವಿವಿಧ ರೀತಿಗಳಲ್ಲಿ ಸೋಗು ಹಾಕಬಹುದು. ಹೆಚ್ಚಾಗಿ ಬಳಕೆಯಲ್ಲಿರುವ ದಾಳಿ ಎಂದರೆ, ಸುಲಭವಾಗಿ ಅಪರಿಚಿತ ಬಳಕೆದಾರರ ಖಾತೆಯ ಮಾಹಿತಿಯನ್ನು ಕದಿಯುವುದು.
ಇನ್ಸ್ಟೆಂಟ್ ಮೆಸೇಜಿಂಗ್ ಚಾಟ್ಗಳ ಮೂಲಕ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ
- ಕಿರುಕುಳ / ಸ್ಪ್ಯಾಮಿಂಗ್:
ಬಲಿಯಾದವರನ್ನು ನಿರಂತರವಾಗಿ ಸಂಪರ್ಕಿಸಲು, ಕಿರಿಕಿರಿಗೊಳಿಸಲು, ಸಿಟ್ಟುಬರಿಸಲು ಮತ್ತು / ಅಥವಾ ಹೆದರಿಸಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಪ್ರಸ್ತುತದಲ್ಲಿ ನಡೆಯುತ್ತಿರುವ ನಡವಳಿಕೆ ಮತ್ತು ಇದು ಪ್ರತ್ಯೇಕವಾದ ಒಂದು ಘಟನೆ ಅಲ್ಲ; ಉದಾಹರಣೆಗೆ, ಸತತವಾಗಿ ಬರುವ ಮೊಬೈಲ್ ಕರೆಗಳು / ಸಂದೇಶಗಳು; ಬೇರೆ ಯಾರೂ ಸಂದೇಶವನ್ನು ಬಿಡದ ರೀತಿಯಲ್ಲಿ ಸಂದೇಶಗಳೊಂದಿಗೆ ಧ್ವನಿಮೇಲ್ ಅನ್ನು ಭರ್ತಿ ಮಾಡುವುಡು.
ದುರುದ್ದೇಶಪೂರಿತ ಕೋಡ್ ಹರಡಲು ಒಂದು ಸುಲಭ ಮಾರ್ಗ
ಇನ್ಸ್ಟೆಂಟ್ ಮೆಸೇಜಿಂಗ್ ನ ಹುಳವು (ವರ್ಮ್) ಇನ್ಸ್ಟೆಂಟ್ ಮೆಸೇಜಿಂಗ್ ನೆಟ್ವರ್ಕ್ಗಳಲ್ಲಿ ಹರಡುವ ಸ್ವಯಂ-ನಕಲಾಗುವ ಮಾಲ್ವೇರ್ ಆಗಿದೆ. ಒಂದು ಇನ್ಸ್ಟೆಂಟ್ ಮೆಸೇಜಿಂಗ್ ವರ್ಮ್ನಿಂದ ವಯುಕ್ತಿಕ ಕಂಪ್ಯೂಟರ್ ಸೋಂಕು ಉಂಟಾದಾಗ, ಅದು ಇನ್ಸ್ಟೆಂಟ್ ಮೆಸೇಜಿಂಗ್ ಕ್ಲೈಂಟ್ಗಾಗಿ ವಿಳಾಸ ಪುಸ್ತಕವನ್ನು ಪತ್ತೆ ಮಾಡುತ್ತದೆ, ಇದನ್ನು ಸ್ನೇಹಿತರ ಪಟ್ಟಿ ಅಥವಾ ಸಂಪರ್ಕ ಪಟ್ಟಿ ಎಂದು ಕರೆಯುತ್ತಾರೆ ಮತ್ತು ಸೋಂಕಿತ ವ್ಯಕ್ತಿಯ ಸಂಪರ್ಕಗಳಿಗೆ ತಾನೇ ಸ್ವತಃ ಕಳುಹಿಸಲು ಪ್ರಯತ್ನಿಸುತ್ತದೆ. ದುರುದ್ದೇಶಪೂರಿತ ಕೋಡ್ ಹೊಂದಿರುವ ಸಂದೇಶವನ್ನು ಸ್ವೀಕರಿಸುವಂತೆ ಸ್ವೀಕರಿಸುವವರನ್ನು ಮೋಸಗೊಳಿಸಲು ಕೆಲವು ಇನ್ಸ್ಟೆಂಟ್ ಮೆಸೇಜಿಂಗ್ ಹುಳುಗಳು ಸಾಮಾಜಿಕ ಎಂಜಿನಿಯರಿಂಗ್ ತಂತ್ರಗಳನ್ನು ಬಳಸುತ್ತವೆ. ಇನ್ಸ್ಟೆಂಟ್ ಮೆಸೇಜಿಂಗ್ ಕಳಿಸುವ ಸಾಫ್ಟ್ವೇರ್ ಅನ್ನು ಸಹ ಸ್ಪ್ಯಾಮ್ ನನ್ನು ತಲುಪಿಸಲು ಬಳಸಲಾಗುತ್ತಿದೆ. ಇ-ಮೇಲ್ಗಳಿಗೆ ಬದಲಾಗಿ ಇನ್ಸ್ಟೆಂಟ್ ಮೆಸೇಜಿಂಗ್ ಮೂಲಕ ವಿತರಿಸಿದ ಸ್ಪ್ಯಾಮ್ ಅನ್ನು 'ಸ್ಪಿಮ್' ಎಂದು ಕರೆಯಲಾಗುತ್ತದೆ.
ನೀವು ಪಡೆದ ಲಿಂಕ್ಗಳನ್ನು ಸಂಶಯದಿಂದ ನೋಡಿರಿ; ಕ್ಲಿಕ್ ಮಾಡುವ ಮುನ್ನ ನಿಮ್ಮ ಸ್ನೇಹಿತರು ಕಳುಹಿಸಿದ್ದರೆಯೇ ಎಂದು ನಿಮ್ಮ ಸ್ನೇಹಿತರನ್ನು ಕೇಳಿ ಖಚಿತಪಡಿಸಿಕೊಳ್ಳಿ.
- ನೆಟ್ವರ್ಕ್ ಸಮಸ್ಯೆಗಳು
ಸೇವಾ ನಿರಾಕರಣೆಯ ದಾಳಿಯ ಅಪಾಯವು ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ ಗಿಂತ ಹೆಚ್ಚಿನದಾಗಿರುತ್ತದೆ. ಈ ದಾಳಿಯು ಇನ್ಸ್ಟಂಟ್ ಮೆಸೆಂಜರನ್ನು ಕುಸಿಯುವಂತೆ ಮಾಡುತ್ತದೆ. ಅತಿಯಾಗಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಕ್ಕಾಗಿ, ಸಂರಚನೆಗಳನ್ನು ನಾಶಪಡಿಸುವುದಕ್ಕಾಗಿ ಮತ್ತು ನೆಟ್ವರ್ಕ ಘಟಕಗಳನ್ನು ಮಾರ್ಪಡಿಸುವುದಕ್ಕಾಗಿ ನೆಟ್ವರ್ಕನ್ನು ಬಳಸುವುದರ ಮೂಲಕ ನ್ಯಾಯಸಮ್ಮತ ಬಳಕೆದಾರರು ನೆಟ್ವರ್ಕ್ ಅನ್ನು ಪ್ರವೇಶಿಸುವುದನ್ನು ಇದು ತಡೆಯುತ್ತದೆ. ಇದರಿಂದ ಅನಾಹುತಕಾರರು ಸಂದೇಶಗಳನ್ನು ಪ್ರತಿಬಂಧಿಸಲು ಸಾಧ್ಯವಾಗುತ್ತದೆ, ಅಕ್ರಮವಾಗಿ ಪರಸ್ಪರ ಸಂವಹನ ಮಾಡಲು ಸಾಧನಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ, ಮತ್ತು ನಿಮ್ಮ ಆಪರೇಟಿಂಗ್ ಸಿಸ್ಟಮ್ ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಇತರ ಸಂಪನ್ಮೂಲಗಳನ್ನು ಬಳಸುತ್ತದೆ.
ಆಗಾಗ್ಗೆ ಮಹಿಳಾ ಬಳಕೆದಾರರು ಪ್ರಮುಖ ಗುರಿಯಾಗುತ್ತಾರೆ. ಒಂದು ಸಾಮಾನ್ಯ ವಿಧದ ದಾಳಿ ಎಂದರೆ ಒಂದು ಹಚ್ಚಿನ ಸಂಖ್ಯೆಯ ಸಂದೇಶಗಳೊಂದಿಗೆ ನಿರ್ದಿಷ್ಟ ಬಳಕೆದಾರರನ್ನು ಪ್ರವಾಹಗೊಳಿಸುವುದಾಗಿದೆ. ಆದಾಗ್ಯೂ, ಹ್ಯಾಕರ್ ಪ್ರವಾಹ ದಾಳಿಯನ್ನು ಸಾಧಿಸಲು ಅವಕಾಶ ನೀಡುವಂತಹ ಅನೇಕ ಉಪಕರಣಗಳು ಇವೆ. ಏನಾಯಿತು ಎಂಬುದನ್ನು ಬಾಧಿತರು ಅರಿತುಕೊಳ್ಳುವ ಮುಂಚೆಯೇ ಸಾಧನವು ಸ್ಪಂದಿಸದಿರಬಹುದು. ಆದ್ದರಿಂದ, ಆಕ್ರಮಣಕಾರಿ ಬಳಕೆದಾರ ಖಾತೆಗಳನ್ನು ಇನ್ಸ್ಟಂಟ್ ಮೆಸೆಂಜರ್ನ ನಿರ್ಲಕ್ಷ್ಯ ಪಟ್ಟಿಗೆ ಸೇರಿಸುವುದು ಬಹಳ ಕಷ್ಟಕರ.
ನೆಟ್ವರ್ಕ್ ಅನ್ನು ಬಳಸುವಾಗ, ಸಂಸ್ಥೆಗಳು ತಮ್ಮ ಅಂತರ್ಜಾಲ ಆಧಾರಿತ ಇನ್ಸ್ಟಂಟ್ ಮೆಸೇಜಿಂಗ್ ದಟ್ಟಣೆಯನ್ನು ಇಂಟರ್ನೆಟ್ ಆಧಾರಿತ ಇನ್ಸ್ಟಂಟ್ ಮೆಸೇಜಿಂಗ್ ಸಂಚಾರದಿಂದ ಪ್ರತ್ಯೇಕಿಸಲು ತಮ್ಮ ನೆಟ್ವರ್ಕ್ ಗಳನ್ನು ನವೀಕರಿಸುವಿಕೆಯನ್ನು ಪರಿಗಣಿಸಬೇಕು
- ಇನ್ಸ್ಟಂಟ್ ಮೆಸೇಜಿಂಗ್ ಸಾಫ್ಟ್ ವೇರ್ ನ ದೋಷಗಳು
ಇತರ ಸಾಫ್ಟ್ವೇರ್ ಅಪ್ಲಿಕೇಶನ್ಗಳಂತೆಯೇ, ಜನಪ್ರಿಯ ಇನ್ಸ್ಟಂಟ್ ಮೆಸೆಂಜರ್ಸ್ ಗಳೂ ಸಹ ಸಾಮಾನ್ಯ ಭದ್ರತಾ ದೋಷಗಳ ಇತಿಹಾಸವನ್ನು ಹೊಂದಿವೆ. ಇನ್ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನನ್ನು ಇನ್ಸ್ಟಾಲ್ ಮಾಡುವುದರಿಂದ ಹೊಸ ದೋಷಗಳು ಸ್ಮಾರ್ಟ್ಫೋನ್ / ಡೆಸ್ಕ್ಟಾಪ್ಗೆ ಪರಿಚಿತವಾಗಬಹುದು.
ಆಂಟಿವೈರಸ್ ಬಳಸಿಕೊಂಡು ನೈಜ-ಸಮಯದ ವೈರಸ್ ಸಂರಕ್ಷಣೆ ಸಕ್ರಿಯಗೊಳಿಸಿ
ಇನ್ಸ್ಟಂಟ್ ಮೆಸೇಜಿಂಗ್ ಕಳುಹಿಸುವಿಕೆಯು ಭದ್ರತೆಯನ್ನು ಉಲ್ಲಂಘಿಸಿದಾಗ ಹ್ಯಾಕರ್ಸ್ಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ ಏಕೆಂದರೆ ಹೆಚ್ಚಿನ ಜನರು ಫೈಲ್ಗಳನ್ನು ವರ್ಗಾವಣೆ ಮಾಡುವಂತಹ ವಿವಿಧ ಉದ್ದೇಶಗಳಿಗಾಗಿ ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಹ್ಯಾಕರ್ಸ್ಗಳು ಸುಲಭವಾಗಿ ನಿಮ್ಮ ಪಿಸಿ ಅಥವಾ ಮೊಬೈಲ್ ಸಾಧನಕ್ಕೆ ದೂರದಿಂದಲೇ ಪ್ರವೇಶವನ್ನು ಪಡೆಯಲು ಅನುಮತಿಸುವ ಮತ್ತು ಇದರ ಜೊತೆಯಲ್ಲಿ ಬರುವ ಅನೇಕ ದೋಷಗಳನ್ನು ಕಂಡುಹಿಡಿಯಲಾಗಿದೆ.
ಇನ್ಸ್ಟೆಂಟ್ ಮೆಸೇಜಿಂಗ್ ಅನ್ನು ಬಳಸುವಾಗ ಅನೇಕ ಪ್ರಯೋಜನಗಳಿವೆ ಆದರೆ ಈ ಅಪ್ಲಿಕೇಶನ್ ಅನ್ನು ಬಳಸುವಾಗ ಅನೇಕ ಭದ್ರತಾ ಸಮಸ್ಯೆಗಳಿವೆ. ನೀವು ಪ್ರಯೋಜನಗಳನ್ನು ಆನಂದಿಸುತ್ತೀರಿ ಮತ್ತು ಈ ಅಪ್ಲಿಕೇಶನ್ ಅನ್ನು ಎಚ್ಚರಿಕೆಯಿಂದ ಬಳಸುತ್ತಿರುವೆರೆಂದು ಎಂದು ಖಚಿತಪಡಿಸಿಕೊಳ್ಳಿ.