ಪ್ರಸಕ್ತ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅಂತರ್ಜಾಲದ ಬಳಕೆಯು ಸದಾಕಾಲದಲ್ಲೂ ಒಳಹೊಕ್ಕಿದ್ದು,  ವ್ಯಕ್ತಿಗಳ ನಡುವಿನ ಸಂವಹನವು ಸೈಬರ್ ಪ್ರಪಂಚದಲ್ಲಿ ನಡೆಯುತ್ತದೆ. ಕೊನೆಗೆ ಇದು ಅಂತರ್ಜಾಲ ವ್ಯಸನದ ಅಸ್ವಸ್ಥತೆ (ಐಎಡಿ), ಅಥವಾ ಇಂಟರ್ನೆಟ್ ನ ಮಿತಿಮೀರಿದ ಬಳಕೆ, ಸಮಸ್ಯಾತ್ಮಕ ಕಂಪ್ಯೂಟರ್ / ಸ್ಮಾರ್ಟ್ ಫೋನ್ ಬಳಕೆ ಎಂದು ಹೆಚ್ಚಾಗಿ ಕರೆಯಲ್ಪಡುವ ವ್ಯಸನದೊಂದಿಗೆ ಅಂತ್ಯಗೊಳ್ಳುತ್ತದೆ. ಇಂಟರ್ನೆಟ್ ವ್ಯಸನವೆಂದರೆ ಯಾವುದೇ ಆನ್ಲೈನ್ ​​ಸಂಬಂಧಿತ ಕಡ್ಡಾಯವಾದ (ಕಂಪಲ್ಸಿವ್) ವರ್ತನೆಯು ಸಾಮಾನ್ಯ ಜೀವನದಲ್ಲಿ ಮಧ್ಯಪ್ರವೇಶಿಸುವುದು, ಹಾಗೂ ಕುಟುಂಬದ ಸ್ನೇಹಿತರ ಮೇಲೆ, ಪ್ರೀತಿಪಾತ್ರರ ಮೇಲೆ ಹಾಗೂ ಕೆಲಸದ ವಾತಾವರಣದಲ್ಲಿ ತೀವ್ರವಾದ ಒತ್ತಡವನ್ನು ಉಂಟುಮಾಡುವುದಾಗಿದೆ. ಇದನ್ನು ಇಂಟರ್ನೆಟ್ ಅವಲಂಬನೆ ಮತ್ತು ಇಂಟರ್ನೆಟ್ ಕಡ್ಡಾಯತೆ (ಕ್ಯಾಂಪಲ್ಶನ್) ಎಂದು ಕರೆಯಬಹುದು.

ಇಂಟರ್ನೆಟ್ ಬಳಕೆಯನ್ನು ಪ್ರಚೋದಿಸುವ ಅಂಶಗಳು

ಬೇಸರ / ಖಿನ್ನತೆ:

ಬೇಸರದ ಕಾರಣದಿಂದ ಒಬ್ಬಂಟಿ ಮಹಿಳೆಯರು ಇಂಟರ್ನೆಟ್ ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಯಾಗುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮದ ಪ್ರೊಫೈಲ್ ಅನ್ನು ತಮ್ಮ ಸ್ಟೇಟಸ್ ನ ಹೊಸ ಅಪ್ಡೇಟ್ ಗಾಗಿ ಹಾಗೂ ಇತರರ ಸ್ಟೇಟಸ್ ನ ಅಪ್ಡೇಟ್ ಗಳಿಗಾಗಿ ಮತ್ತು ತಮಗೆ ಮತ್ತು ಇತರರಿಗೆ ದೊರಕಿದ ಲೈಕ್ ಗಳು ಮತ್ತು ಶೇರ್ಸ್ ಗಳನ್ನು ಪರಿಶೀಲಿಸಲು ನೋಡುತ್ತಾರೆ. ಇದು ಆ ವ್ಯಕ್ತಿಗೆ ಗೀಳಾಗಿ ಮಾರ್ಪಾಡಾಗುತ್ತದೆ. ಮತ್ತು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ.

ಒತ್ತಡ ಮತ್ತು ಪಲಾಯನವಾದ:

ಕಚೇರಿ ಅಥವಾ ಕುಟುಂಬ ಜೀವನದಲ್ಲಿ ಒತ್ತಡದಲ್ಲಿರುವ ಅನೇಕ ಮಹಿಳೆಯರು ತಮ್ಮ ಒತ್ತಡವನ್ನು ನಿವಾರಿಸಲು ಅಂತರ್ಜಾಲವನ್ನು ಅವಲಂಬಿಸಿರುತ್ತಾರೆ ಮತ್ತು ಒತ್ತಡದ ಪರಿಸ್ಥಿತಿಯನ್ನು ತೊಡೆದುಹಾಕಲು ಇದನ್ನು ಸುಲಭವಾದ ಮಾರ್ಗವೆಂದು ಪರಿಗಣಿಸುತ್ತಾರೆ.

ಇಂಟರ್ನೆಟ್ ಸಂಬಂಧಿತ ಚಟುವಟಿಕೆಗಳು

ಸಾಮಾಜಿಕ ಮಾಧ್ಯಮ:

ಹೆಚ್ಚಿನ ಮಹಿಳೆಯರು ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಯಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಅವರ ಸಾಮಾಜಿಕ ಜಾಲತಾಣದ ಪ್ರೊಫೈಲ್ ಅನ್ನು ಪರೀಕ್ಷಿಸುವ ಮೂಲಕ ಅಥವಾ ಪ್ರಸ್ತುತದಲ್ಲಿ  ಟ್ರೆಂಡ್ ಆಗಿರುವ  ನಕಲಿ ಫೋಟೋಗಳ ಅಪ್ಡೇಟ್ ಅನ್ನು ಮಾಡುವ  ಮೂಲಕ ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಪೋಸ್ಟ್ ಗೆ ಹೆಚ್ಚೆಚ್ಚು ಲೈಕ್ಸ್ ಮತ್ತು ಶೇರ್ಸ್ಅನ್ನು ಪಡೆಯಲು,  ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಸಾಮಾಜಿಕ  ಮಾಧ್ಯಮದಲ್ಲಿ ಹೊರಹಾಕುತ್ತಿದ್ದಾರೆ. ಸೈಬರ್ ಪ್ರಪಂಚದ ಪ್ರಸಕ್ತ ಸನ್ನಿವೇಶದಲ್ಲಿ ಹೆಚ್ಚಿನ ಮಹಿಳೆಯರು ಇದನ್ನೇ ಮಾಡಲು ಮುನ್ದಾಗುತ್ತಿದ್ದಾರೆ.

ಆನ್ಲೈನ್ ​​ಶಾಪಿಂಗ್:

ಮಹಿಳೆಯರ ಜೀವನದಲ್ಲಿ ಶಾಪಿಂಗ್ ಅತ್ಯಂತ ಆಸಕ್ತಿದಾಯಕ ವಿಷಯವಾಗಿದೆ. ಆನ್ಲೈನ್ ​​ಶಾಪಿಂಗ್  ಮಹಿಳೆಯರಿಗೆ ಆಯ್ಕೆಗಳ ಪ್ರಪಂಚವನ್ನೇ ನೀಡುತ್ತದೆ.  ಖರೀದಿ ಮಾಡುತ್ತಾರೋ ಅಥವಾ ಇಲ್ಲವೋ ಆದರೆ  ಅವರು ಬೇರೆ ಬೇರೆ ಉತ್ಪನ್ನಗಳನ್ನು ವಿವಿಧ ಆನ್ಲೈನ್ ​​ಶಾಪಿಂಗ್ ಪೋರ್ಟಲ್ಗಳಲ್ಲಿ ಹುಡುಕುತ್ತಲೇ ಇರುತ್ತಾರೆ. ಇಂಟರ್ನೆಟ್ನಲ್ಲಿ ವ್ಯಯಿಸಿದ ಸಮಯವನ್ನು ಕಡಿಮೆಗೊಳಿಸುವುದು ಕೂಡ ಕಷ್ಟಕರವೆಂದು ಬಹಳಷ್ಟು ಜನರು ಭಾವಿಸುತ್ತಾರೆ.

ಆನ್ಲೈನ್ ​​ಗೇಮಿಂಗ್:

ಆನ್ಲೈನ್ ​​ಗೇಮಿಂಗ್ಗೆ  ವ್ಯಸನಿಯಾಗಿರುವ ಸಣ್ಣ ವರ್ಗದ ಮಹಿಳೆಯರು ಸಹ ಇದ್ದಾರೆ. ನೈಜ ಪ್ರಪಂಚದಲ್ಲಿ ಸಾಮಾಜಿಕವಾಗಿ ಹೊಂದಿಕೊಳ್ಳುವ ಬದಲು ಹೆಚ್ಚು ಮಹಿಳೆಯರು ಆನ್ಲೈನ್ ​​ಗೇಮಿಂಗ್ನಲ್ಲಿ ತಮ್ಮ ಬಿಡುವಿನ ವೇಳೆಯನ್ನು ಕಳೆಯುತ್ತಾರೆ.

ಆನ್ಲೈನ್ ಚಾಟ್:

ಪ್ರತಿಯೊಬ್ಬರೂ ಚಾಟಿಂಗ್ ಬಳಸುತ್ತಾರೆ ಆದರೆ ಕೆಲವರಿಗೆ ಚಾಟಿಂಗ್ ಮಾಡುವುದನ್ನು ನಿಲ್ಲಿಸಲು ಆಗುವುದಿಲ್ಲ. ಇದು ಯಾವುದೇ ರೀತಿಯಲ್ಲಿ ಚಾಟ್ ಅನ್ನು ಒಳಗೊಂಡಿರಬಹುದು. ವಾಸ್ತವ ಜಗತ್ತಿನಲ್ಲಿ ಹೆಚ್ಚು ಆರಾಮ ಮತ್ತು ಸಂತೋಷವನ್ನು ಕಂಡುಕೊಂಡಾಗ ಅನೇಕ ಬಾರಿ ಮಹಿಳೆಯರು ಸಾಮಾಜಿಕ ಸಂಪರ್ಕದಿಂದ ಹೊರಬರುತ್ತಾರೆ.

ಇಂಟರ್ನೆಟ್ ಅಡಿಕ್ಷನ್ ನನ್ನು ಹೇಗೆ ಗುರುತಿಸಬಹುದು?

 • ಸ್ಮಾರ್ಟ್ ಫೋನ್ ಬಳಸುತ್ತಿರುವಾಗ ಖುಷಿ ಅಥವಾ ಸುಖದ ಭಾವನೆ.
 •  ಚಟುವಟಿಕೆಯನ್ನು ನಿಲ್ಲಿಸಲು ಅಸಮರ್ಥತೆ
 •  ಸ್ಮಾರ್ಟ್ಫೋನ್ನಲ್ಲಿ ಹೆಚ್ಚು ಸಮಯ ಕಳೆಯುವ ಕಡುಬಯಕೆ.
 •  ಕುಟುಂಬ ಮತ್ತು ಸ್ನೇಹಿತರನ್ನು ನಿರ್ಲಕ್ಷಿಸುವುದು
 •  ಕಂಪ್ಯೂಟರನ್ನು ಬಳಸಿದಿರುವಾಗ ಖಾಲಿ, ಖಿನ್ನತೆ ಮತ್ತು ಕೆರಳಿದ ಭಾವನೆ
 •  ಚಟುವಟಿಕೆಗಳ ಬಗ್ಗೆ ಕುಟುಂಬ ಮತ್ತು ಸ್ನೇಹಿತರಿಗೆ ಸುಳ್ಳುಹೇಳುವುದು.
 •  ಶಾಲೆ ಅಥವಾ ಕೆಲಸದಲ್ಲಿ ತೊಂದರೆಗಳು

ಒಮ್ಮೆ ನೀವು ಅಂತರ್ಜಾಲಕ್ಕೆ ವ್ಯಸನಿಯಾಗಿ ಹೋದರೆ,  ಅದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ, ಅನೇಕ ಸೈಫರ್ ಬೆದರಿಕೆಗಳಿಗೆ ನಿಮ್ಮ ಜೀವನವನ್ನು ಅಪಾಯಕ್ಕೆ ಒಳಮಾಡುತ್ತದೆ.

ಇಂಟರ್ನೆಟ್ ವ್ಯಸನವನ್ನು  ತಪ್ಪಿಸಲು ಹೇಗೆ

 • ನಿಮ್ಮ ಇಂಟರ್ನೆಟ್ ಬಳಕೆಯ ಸಮಯ ಮಿತಿಯನ್ನು ನಿಗದಿಪಡಿಸಿ.
 •  ಮೊಬೈಲ್ ಫೋನ್ / ಇಂಟರ್ನೆಟ್ ಬಳಕೆಯನ್ನು ಟ್ರಾಕ್ ಮಾಡಿ ದಿನದಿಂದ ದಿನಕ್ಕೆ ಬಳಕೆಯನ್ನು ಕಡಿಮೆ ಮಾಡುವ ಅಪ್ಲಿಕೇಶನ್ ನನ್ನು ಇನ್ಸ್ಟಾಲ್ ಮಾಡಿ.
 •  ದೀರ್ಘಕಾಲದವರೆಗೆ ಅಂತರ್ಜಾಲದ ಬಳಕೆಯನ್ನು ನಿರ್ಬಂಧಿಸಲು ನಿಮ್ಮ ಸ್ನೇಹಿತರು / ಕುಟುಂಬದಿಂದ ನೀವು ಸಹಾಯ ಪಡೆಯಬಹುದು.
 •  ಕಂಪ್ಯೂಟರ್ ಗೇಮ್ಗಳನ್ನು ಎನ್ ಇನ್ಸ್ಟಾಲ್ ಮಾಡಿ ಮತ್ತು ಕನಿಷ್ಠ ಒಂದು ಅಥವಾ ಎರಡು ತಿಂಗಳ ಕಾಲ ಸಾಮಾಜಿಕ ಜಾಲಗಳು ಮತ್ತು ಇತರ ಮನರಂಜನಾ ವೆಬ್ ಚಟುವಟಿಕೆಗಳಿಂದ ದೂರವಿರಲು ಪ್ರಯತ್ನಿಸಿ.
 •  ಅಂತರ್ಜಾಲ ಬ್ರೌಸಿಂಗ್ಗಾಗಿ ಸಮಯ ನಿಗದಿಮಾಡಿ ಆದರೆ ಅದನ್ನು ಅತಿಯಾಗಿ ಮೀರಿಸಬೇಡಿ.
 •  ಲೇಖನಗಳು, ಬ್ರೌಸಿಂಗ್, ವೀಡಿಯೋಗಳನ್ನು ವೀಕ್ಷಿಸುವುದು, ಇಮೇಲ್ಗಳನ್ನು ಲ್ಯಾಪ್ಟಾಪ್ಗೆ ಕಳುಹಿಸುವುದು ಈ ರೀತಿಯ ಅನೇಕ ಚಟುವಟಿಕೆಗಳಿಗೆ ಬದಲಾವವಣೆ ಮಾಡುತ್ತಿರಿ.
 •  ಅಪ್ಲಿಕೇಶನ್ ಮತ್ತು ಇಮೇಲ್ ನೋಟಿಫಿಕೇಶನ್ (ಅಧಿಸೂಚನೆ) ಗಳನ್ನು ಆಫ್ ಮಾಡಿ
 •  ವ್ಯಸನಕಾರಿ ವೆಬ್ಸೈಟ್ಗಳಿಂದ ದೂರವಿರಿ.
 •  ಓದುವ ವಿಷಯಗಳು / ಉದ್ಯೋಗ ಸಂಬಂಧಿತ ಪುಸ್ತಕಗಳು / ಪತ್ರಿಕೆಯ ಓದಿಗೆ ತೊಡಗಿಸಿಕೊಳ್ಳಿ. ಇದು ನಿಮ್ಮ ಓದುವ ಅಭ್ಯಾಸವನ್ನು ಹೆಚ್ಚಿಸುತ್ತದೆ.
 •  ನೀವು ಇಂಟರ್ನೆಟ್ ಅನ್ನು ಬಳಸದಿದ್ದಲ್ಲಿ ಉಳಿಸಬಹುದಾದ ಹಣದ ಬಗ್ಗೆ ಯೋಚಿಸಿ.
 •  ಅಂತರ್ಜಾಲವನ್ನು ಕಡಿಮೆ ಬಳಸಿದರೆ ನೀವು ಏಕೆ ಸಂತೋಷದಿಂದಿರುವಿರಿ ಎಂಬ ಕಾರಣಗಳನ್ನು ಪಟ್ಟಿ ಮಾಡಿ.
 •  ಮಲಗುವ ಕೋಣೆಗಳಿಂದ ಇಂಟರ್ನೆಟ್ ಸಕ್ರಿಯಗೊಳಿಸಿದ ಸಾಧನಗಳನ್ನು ತೆಗೆದುಹಾಕಿ.
 •  ನಿಮ್ಮ ಮಲಗುವ ಮಾದರಿಯನ್ನು ನಿಯಂತ್ರಿಸಿ. ಅಂತರ್ಜಾಲದಿಂದ ಹಲವಾರು ಜನರು ನಿದ್ರೆ ಕಳೆದುಕೊಳ್ಳುತ್ತಾರೆ

ಮತ್ತು ತಮ್ಮ ನಿದ್ರೆಯ ಮಾದರಿಯನ್ನು ಅವ್ಯವಸ್ಥೆಗೊಳಿಸುತ್ತಾರೆ. ನೀವು ಹೆಚ್ಚು ಸಂಘಟಿತರಾಗಿ ಮತ್ತು ಸ್ವಯಂ ಶಿಸ್ತುಬದ್ಧರಾಗಿದ್ದಾರೆ, ಇಂಟರ್ನೆಟ್ ನಿಮಗೆ ಪ್ರಯೋಜನಕಾರಿಯಾಗುತ್ತದೆ.

Page Rating (Votes : 2)
Your rating: