• ಆನ್ಲೈನ್ ​​ಟ್ಯಾಕ್ಸಿ ಅಪ್ಲಿಕೇಶನ್ಗಳು

ಸ್ಮಾರ್ಟ್ಫೋನ್ಗಳು ಮತ್ತು ಸಾಕಷ್ಟು ಅಪ್ಲಿಕೇಶನ್ಗಳು ನಾವು ನಮ್ಮ ಜೀವನವನ್ನು ನೆಡೆಸುವ ರೀತಿಯನ್ನು ಬದಲಾಯಿಸಿವೆ. ಟ್ಯಾಕ್ಸಿ ಬುಕಿಂಗ್ ಅಪ್ಲಿಕೇಶನ್ಗಳು ಸಾಂಪ್ರದಾಯಿಕ ಟ್ಯಾಕ್ಸಿ ಉದ್ಯಮವನ್ನು ನಿಧಾನಗೊಳಿಸಿದೆ. ಊಬರ್, ಮೆರು ಮತ್ತು ಓಲಾ ಮುಂತಾದ ಪ್ರಸಿದ್ಧ ಹೆಸರುಗಳು ಈಗಾಗಲೇ ಖಾಸಗಿ ಸಾರಿಗೆಯ ಅನುಕೂಲಕರ ಮಾರ್ಗವನ್ನು ತೋರಿಸಿವೆ.

ಈ ಅಪ್ಲಿಕೇಶನ್ಗಳನ್ನು ಬಳಸಲು, ಹೆಸರು, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಒಳಗೊಂಡಿರುವ ನಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಮೂಲಕ ನಾವು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದು ಮಹಿಳೆಯರ ಗುರುತುಗೆ ಬೆದರಿಕೆಯನ್ನು ಉಂಟುಮಾಡಬಹುದು. ಟ್ಯಾಕ್ಸಿ / ಕ್ಯಾಬ್ ಅನ್ನು ಬುಕಿಂಗ್ ಮಾಡುವಾಗ ನಮ್ಮ ಮೊಬೈಲ್ ಸಂಖ್ಯೆಯನ್ನು ಯಾವ ಚಾಲಕನನ್ನು ನಿಗದಿಪಡಿಸಲಾಗಿದೆಯೋ ಅವರಿಗೆ ಹಂಚಲಾಗುತ್ತದೆ. ಚಾಲಕನು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕದಿಯಬಹುದು ಮತ್ತು ದುರುಪಯೋಗ ಪಡಿಸಿಕೊಳ್ಳಬಹುದು.

  • ಶೈಕ್ಷಣಿಕ ಅಪ್ಲಿಕೆಶನ್ ಗಳು

ತಾಯಂದಿರು ಯಾವಾಗಲೂ ತಮ್ಮ ಮಕ್ಕಳಿಗಾಗಿ ಅತ್ಯುತ್ತಮವಾದುದ್ದನ್ನೇ ಬಯಸುತ್ತಾರೆ. ಕೆಲವು ಶೈಕ್ಷಣಿಕ ಅಪ್ಲಿಕೇಶನ್ಗಳನ್ನು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಮಾಡಲಾಗುತ್ತದೆ, ಕೆಲವನ್ನು ಇನ್ನೇನು ಸ್ವಲ್ಪ ಕಾಲದಲ್ಲಿ ಕಾಲೇಜು ಪದವೀಧರರಾಗುವವರಿಗೆ ಮಾಡಲಾಗುತ್ತದೆ; ಕೆಲವು ಶಿಕ್ಷಣವನ್ನು ಒದಗಿಸುವವರಿಗೆ ಹೆಚ್ಚು ಸೂಕ್ತವಾದವಾಗಿರುತ್ತದೆ. ಶೈಕ್ಷಣಿಕ ಅಪ್ಲಿಕೇಶನ್ಗಳು ತಾಯಂದಿರಲ್ಲಿ ಸಾಕಷ್ಟು ಗಮನ ಸೆಳೆದಿದೆ. ಆದರೆ ಅತ್ಯುತ್ತಮವಾದವುಗಳನ್ನು ಪತ್ತೆಹಚ್ಚುವುದು ನೀವು ಆಲೋಚಿಸುವುದಕ್ಕಿಂತ ಹೆಚ್ಚು ಕಷ್ಟ.

ಟ್ರಯಲ್ ಅವಧಿಯಲ್ಲಿ ಮಾಹಿತಿಯುಕ್ತ ವಿಷಯದೊಂದಿಗೆ ಅನೇಕ ಅಪ್ಲಿಕೇಷನ್ ಗಳು ಉಚಿತ ಪ್ರಯೋಗವನ್ನು ನೀಡುತ್ತವೆ. ಟ್ರಯಲ್ ಅವಧಿಯು ಮುಗಿದ ನಂತರ, ಅಪ್ಲಿಕೇಷನನ್ನು ಖರೀದಿಸಲು ಪಾವತಿಸಬೇಕಾಗುತ್ತದೆ ಮತ್ತು ಪಾವತಿಸಿದ ನಂತರ ಅಪ್ಲಿಕೇಷನಿನ ವಿಷಯದ ಗುಣಮಟ್ಟ ಕುಸಿಯುತ್ತದೆ ಮತ್ತು ಗ್ರಾಹಕರು ಹಣವನ್ನು ಕಳೆದುಕೊಳ್ಳುತ್ತಾರೆ ಮತ್ತು ಮೋಸಕ್ಕೆ ಒಳಗಾಗುತ್ತಾರೆ. ಕೆಲವು ವಿಶ್ವಾಸಾರ್ಹವಾದ ಅಪ್ಲಿಕೇಷನ್ ಗಳೆಂದರೆ ಗೂಗಲ್ ಕ್ಲಾಸ್ ರೂಂ, ಕ್ಲಾಸ್ ಟ್ರೀ, ಬೈಜೂಸ್ ಆಪ್, ಖಾನ್ ಅಕಾಡೆಮಿ, ಎಡ್ಮೊಡೋ ಇತ್ಯಾದಿ.

  • ಬ್ಯಾಂಕಿಂಗ್ ಅಪ್ಲಿಕೇಶನ್ಗಳು

ಬ್ಯಾಂಕಿಂಗ್ ಅಪ್ಲಿಕೇಶನ್ಗಳ ಅಭಿವೃದ್ಧಿಯೊಂದಿಗೆ, ಬ್ಯಾಂಕುಗಳ ಪ್ರಕ್ರಿಯೆಯು ವೇಗವಾಗಿದೆ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿದೆ ಮತ್ತು ದಾಖಲೆ ಇಟ್ಟುಕೊಳ್ಳುವುದು ಮತ್ತು ಪುನಃ ಪಡೆದುಕೊಳ್ಳುವುದು ಸುಲಭವಾಗಿದೆ. ವಾರ್ಷಿಕ, ಮಾಸಿಕ ಮತ್ತು ದೈನಂದಿನ ಆಧಾರದ ಮೇಲೆಯೂ ಸಹ ಬಳಕೆದಾರರು ತಮ್ಮ ಖರ್ಚು ಮಾಡುವ ಅಭ್ಯಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ವಿಶ್ಲೇಷಿಸಲು ಬ್ಯಾಂಕಿಂಗ್ ಅಪ್ಲಿಕೇಶನ್ಗಳು ಸಹಾಯ ಮಾಡುತ್ತವೆ.

ಮಹಿಳೆಯರು ಆನ್ಲೈನ್ ​​ವಹಿವಾಟುಗಳಿಗೆ ಬ್ಯಾಂಕಿಂಗ್ ಅಪ್ಲಿಕೇಷನ್ಗಳನ್ನು ಅವಲಂಬಿಸಿರುತ್ತಾರೆ ಮತ್ತು ಆನ್ಲೈನ್ ​​ಶಾಪಿಂಗ್ ಹಾಗೂ ಮುಂತಾದವುಗಳಿಗೆ ಅದರಿಂದ ಪಾವತಿಸುತ್ತಾರೆ. ಇದು ಎಲ್ಲಾ ಧನಾತ್ಮಕ ವೈಶಿಷ್ಟ್ಯಗಳನ್ನು ಹೊಂದಿರುವುದರ ಜೊತೆಯಲ್ಲಿ ಋಣಾತ್ಮಕ ಪರಿಣಾಮವನ್ನು ಕೂಡ ಹೊಂದಿದೆ. ಇಲ್ಲಿ ಸೈಬರ್ ಅಪರಾಧಿಗಳು ಕಾನೂನುಬದ್ಧ ಬ್ಯಾಂಕ್ ವೆಬ್ಸೈಟ್ಗಳನ್ನು ಹೋಲುವ ಲೋಗೋಗಳು / ಸಂದೇಶಗಳೊಂದಿಗೆ ವಹಿವಾಟಿನ ಲಿಂಕನ್ನು ಒಳಗೊಂಡ ಇಮೇಲ್ ಕಳುಹಿಸಬಹುದು. ಈ ಲಿಂಕ್ಗಳ ಮೂಲಕ ನೀವು ವ್ಯವಹಾರ ನಿರ್ವಹಿಸುವಾಗ ಹಣವನ್ನು ನೇರವಾಗಿ ಸೈಬರ್ ಕ್ರಿಮಿನಲ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

  • ಶಾಪಿಂಗ್ ಅಪ್ಲಿಕೇಶನ್ ಗಳು

ಆನ್ಲೈನ್ ​​ಶಾಪಿಂಗ್ ವೆಬ್ಸೈಟ್ಗಳು ಈಗ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿಸಲು ಮೊಬೈಲ್ ಸ್ನೇಹಿ ಅಪ್ಲಿಕೇಷನ್ ಗಳನ್ನು ಹೊಂದಿವೆ. ಆಕರ್ಷಕ ಕೊಡುಗೆಗಳೊಂದಿಗೆ ವಿಭಿನ್ನ ಶಾಪಿಂಗ್ ಅಪ್ಲಿಕೇಶನ್ಗಳ ಜಾಹೀರಾತುಗಳು ಸಾಮಾಜಿಕ ಮಾಧ್ಯಮವು ಪ್ರವಾಹದಂತೆ ಬರುತ್ತಿರುತ್ತದೆ.

ಮಹಿಳೆಯರು ಜಾಹೀರಾತುಗಳಲ್ಲಿ ಪ್ರದರ್ಶಿಸುವ ಉತ್ಪನ್ನಗಳೊಂದಿಗಿನ ಕೊಡುಗೆಗಳಿಗೆ ಆಕರ್ಷಿತರಾಗುತ್ತಾರೆ. ಅವರು ಡೌನ್ಲೋಡ್ ಮಾಡುವ ಮೊದಲು ಈ ಅಪ್ಲಿಕೇಶನ್ಗಳ ಗೌಪ್ಯತೆ ಸೆಟ್ಟಿಂಗ್ಗಳನ್ನು ಸಹ ಪರಿಶೀಲಿಸುವುದಿಲ್ಲ. ಇದು ಮೊಬೈಲ್ ಫೋನ್ಗಳಲ್ಲಿ ಸಂಗ್ರಹಿಸಿಡಲಾದ ನಿಮ್ಮ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ರಾಜಿಮಾಡಿಕೊಳ್ಳುವುದಕ್ಕೆ ಕಾರಣವಾಗ ಬಹುದು. ಈ ಅಪ್ಲಿಕೇಶನ್ಗಳು ಗ್ರಾಹಕರನ್ನು ಖರೀದಿಯ ಸಮಯದಲ್ಲಿ ತೋರಿಸಲ್ಪಟ್ಟ ಉತ್ಪನ್ನಕ್ಕಿಂತ ಅಗ್ಗದ ಉತ್ಪನ್ನಗಳೊಂದಿಗೆ ಮೋಸ ಮಾಡಬಹುದು.

  • ಉದ್ಯೋಗದ ಪೋರ್ಟಲ್ಗಳು

ಆನ್ಲೈನ್ ​​ಉದ್ಯೋಗದ ಪೋರ್ಟಲ್ ನಲ್ಲಿ ನೀವು ಪ್ರಸ್ತುತದಲ್ಲಿನ ಎಲ್ಲಾ ಖಾಲಿಹುದ್ದೆಯನ್ನೂ ಮತ್ತು ಪ್ರಪಂಚದಾದ್ಯಂತದ ಉದ್ಯೋಗವನ್ನು ನೋಡಬಹುದಾಗಿರುತ್ತದೆ. ನಿಮ್ಮ ಕೆಲಸದ ಅರ್ಜಿಯನ್ನು ಈ ಉದ್ಯೋಗ ಪೋರ್ಟಲ್ ಮೂಲಕ ಸಲ್ಲಿಸಬಹುದು ಮತ್ತು ನಿಮ್ಮ ಅರ್ಜಿಯು ತಕ್ಷಣ ಗಮನ ಸೆಳೆಯುವುದನ್ನು ಖಚಿತ ಪಡಿಸಿಕೊಳ್ಳಬಹುದು. ಕೆಲವು ಹೆಸರುವಾಸಿಯಾದ ಉದ್ಯೋಗ ಪೋರ್ಟಲ್ ಅಪ್ಲಿಕೇಶನ್ ಗಳೆಂದರೆ ನೌಕ್ರಿ, ಟೈಮ್ಸ್ ಜಾಬ್ಸ್, ಇಂಡೀಡ್, ಶೈನ್ ಮುಂತಾದುವುಗಳಾಗಿವೆ. ಇದಕ್ಕೆ ಮುಂಚೆಯೇ ತಿಳಿಸಿದಂತೆಯೇ ಇದು ನಿಮ್ಮ ಗುರುತಿನ ಬೆದರಿಕೆಗೆ ಕಾರಣವಾಗಬಹುದು.

ಗುರುತನ್ನು ಕದಿಯುವ ಕಳ್ಳರು, ಕೆಲಸದ ಬದಲಾವಣೆಯನ್ನು ಬಯಸುತ್ತಿರುವ ಜನರನ್ನು ಹುಡುಕಲು ಪ್ರಮುಖ ಉದ್ಯೋಗ ತಾಣಗಳನ್ನು ಪರಿಶೀಲಿಸುತ್ತಿರುತ್ತಾರೆ. ಅವರು ನಿಮ್ಮ ಉದ್ಯೋಗ ಹುಡುಕಾಟದ ಕೀವರ್ಡ್ಗಳನ್ನು ಸಂಗ್ರಹಿಸುತ್ತಾರೆ ಮತ್ತು ನಿಮಗೆ ನಕಲಿ ಕೆಲಸವನ್ನು ನೀಡುವ ಕರೆಗಳನ್ನು ಮಾಡುತ್ತಾರೆ. ಅವರು ಉದ್ಯೋಗ ಪೋರ್ಟಲ್ಗಳಲ್ಲಿ ನೀವು ಬ್ರೌಸ್ ಮಾಡುವ ಕೀವರ್ಡ್ಗಳಿಗೆ ಸಂಬಂಧಿಸಿದ ಕೆಲಸ ವನ್ನು ನೀಡುತ್ತೇವೆಂದು ತಿಳಿಸುತ್ತಾರೆ ಮತ್ತು ನಿಮ್ಮ ನಂಬಿಕೆಯನ್ನು ಪಡೆದುಕೊಳ್ಳುತ್ತಾರೆ.

  • ಚಾಟ್ / ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಷನ್ಸ್

ಇಂದಿನ ದಿನಗಳಲ್ಲಿ ಇ-ಮೇಲ್ / ಎಸ್ಎಂಎಸ್ / ಇನ್ಸ್ಟೆಂಟ್ ಮೆಸೇಜಿಂಗ್ (ಐಎಂ)ಗಳು ಮಹಿಳೆಯರಲ್ಲಿ ಸಂಪರ್ಕದ ಮುಖ್ಯ ಮಾಧ್ಯಮವಾಗಿದೆ. ಸ್ಮಾರ್ಟ್ ಫೋನ್ ಬಳಸದೆ ಇಲ್ಲದಿರುವವರನ್ನು ಕಂಡುಹಿಡಿಯುವುದು ಕಷ್ಟಕರ. ಮೊಬೈಲ್ IM ಅಪ್ಲಿಕೇಶನ್ಗಳು ಶಾರ್ಟ್ ಮೆಸೇಜ್ ಸರ್ವಿಸ್ (ಎಸ್ಎಂಎಸ್) ಅನ್ನು ಹಿಂದಿಕ್ಕಿವೆ.

IM ಅಪ್ಲಿಕೇಶನ್ಗಳ ಬಳಕೆದಾರ ಸ್ನೇಹಪರತೆಯ ಕಾರಣದಿಂದ ಮಹಿಳೆಯರು IM ಅಪ್ಲಿಕೇಶನ್ಗಳನ್ನು ಬಳಸಲು ಒಲವು ತೋರುತ್ತಾರೆ. ಇದನ್ನು ಸ್ನೇಹಿತರು / ಕುಟುಂಬಕ್ಕೆ ಕರೆ ಮಾಡಲು ಬಳಸಬಹುದು. ಇದು ಗುಂಪು ಚಾಟ್ಗಳನ್ನು ಮಾಡಲು ಸಹ ಅನುಮತಿಸುತ್ತದೆ. ಇದು ಅನೇಕ ವಿಧಗಳಲ್ಲಿ ನಿಮಗೆ ಸಹಾಯ ಮಾಡಿದ್ದರೂ ಸಹ, ಇದರಲ್ಲಿ ಹಲವಾರು ಭದ್ರತಾ ಸಮಸ್ಯೆಗಳಿವೆ. ನಿಮ್ಮ ಪ್ರೊಫೈಲ್ ಚಿತ್ರವನ್ನು ಯಾರಾದರೂ ವೀಕ್ಷಿಸಬಹುದು ಮತ್ತು ಬಳಸಬಹುದಾಗಿದೆ. ಇದು ನಿಮ್ಮ ಗುರುತಿಗೆ ಬೆದರಿಕೆಯನ್ನು ಉಂಟು ಮಾಡಬಹುದು. ವಾಟ್ಸಾಪ್, ವಿ ಚಾಟ್ , ಮತ್ತು ಲೈನ್ ಮುಂತಾದ ಮೊಬೈಲ್ ಇನ್ಸ್ಟೆಂಟ್ ಮೆಸೇಜ್ (IM) ಅಪ್ಲಿಕೇಷನ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

  • ಪ್ರಯಾಣ ಮತ್ತು ಹೋಟೆಲ್ ಬುಕಿಂಗ್ ಅಪ್ಲಿಕೇಶನ್ಗಳು

ಪ್ರಯಾಣ ಮತ್ತು ಹೋಟೆಲ್ ಬುಕಿಂಗ್ ಅಪ್ಲಿಕೇಶನ್ಗಳು ಕೆಲವೊಮ್ಮೆ, ವಿಮಾನದ ಟಿಕೆಟ್ ಅಥವಾ ಹೋಟೆಲ್ಗಳನ್ನು ಬುಕ್ ಮಾಡುತ್ತಿರುವಾಗ ಕಾಂಬೊ ಕೊಡುಗೆಗಳನ್ನು ನೀಡುತ್ತದೆ. ಬಹಳಷ್ಟು ಪ್ರಯಾಣ ಕಂಪನಿಗಳು ಮೊದಲ ಬಾರಿಗೆ ಅದರ ಅಪ್ಲಿಕೇಷನ್ನಿಂದ ನಿಮ್ಮ ಟಿಕೆಟ್ಗಳನ್ನು ಖರೀದಿ ಮಾಡಿದಾಗ ರಿಯಾಯಿತಿಯನ್ನು ನೀಡುತ್ತವೆ. ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಈ ಪ್ರಯಾಣ ಅಪ್ಲಿಕೇಶನ್ಗಳು ಆಗಾಗ್ಗೆ ಅಪ್ಲಿಕೇಶನ್ಗಳ ಮೂಲಕ ಖರೀದಿಗೆ ಪ್ರತ್ಯೇಕವಾಗಿ ವಿಮಾನ ಮತ್ತು ಹೋಟೆಲ್ ನ ಡೀಲ್ ಗಳನ್ನು ಒದಗಿಸುತ್ತವೆ.

ಈ ಕೊಡುಗೆಗಳನ್ನು ನೋಡಿ ಟಿಕೆಟ್ / ಹೋಟೆಲ್ ಅನ್ನು ಬುಕ್ ಮಾಡಿ ಕೊನೆಯಲ್ಲಿ ತಮ್ಮ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಹೋಟೆಲ್ ನೋಂದಣಿ ಆಗದೇ ಇರುವುದನ್ನು ಕಾಣುತ್ತಾರೆ. ಮತ್ತು ಹಣವನ್ನು ನಷ್ಟಮಾಡಿಕೊಳ್ಳುತ್ತಾರೆ. ಮೇಕ್ ಮೈ ಟ್ರಿಪ್, ಟ್ರಿವಗೊ, ಯಾತ್ರ, ಅಗೊಡಾ ಇತ್ಯಾದಿಗಳು ಕೆಲವು ವಿಶ್ವಾಸಾರ್ಹ ಅಪ್ಲಿಕೇಶನ್ಗಳಾಗಿವೆ.

 

Page Rating (Votes : 1)
Your rating: