ಎಲೆಕ್ಟ್ರಾನಿಕ್ ಸಂವಹನದ ಮೂಲಕ ನಂಬಲರ್ಹವಾದ ಘಟಕದಂತೆ ಕಂಡುಬಂದು ಮೋಸದಿಂದ ಬಳಕೆದಾರರ ಹೆಸರುಗಳು, ಪಾಸ್ವರ್ಡ್ಗಳು, ಪಿನ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ವಿವರಗಳಂತಹ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ವಿಧಾನವೇ ಫಿಶಿಂಗ್.

ಇ-ಮೇಲ್ ವಂಚನೆ ಅಥವಾ ಇನ್ಸ್ಟೆಂಟ್ ಮೆಸೇಜಿಂಗ್ ಮೂಲಕ ಫಿಶಿಂಗ್ ಅನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ನಕಲಿ ವೆಬ್ಸೈಟ್ನಲ್ಲಿ ವಿವರಗಳನ್ನು ನಮೂದಿಸಲು ಬಳಕೆದಾರರಿಗೆ ನಿರ್ದೇಶಿಸುತ್ತದೆ ಮತ್ತು ಅದರ ನೋಟ ಮತ್ತು ಸ್ವರೂಪವು ನೈಜವಾದ ವೆಬ್ಸೈಟ್ ಗಳಿಗೆ ಹೋಲಿಸಿದರೆ  ಬಹುತೇಕ ಒಂದೇ ರೀತಿಯದ್ದಾಗಿದೆ. ಬಳಕೆದಾರರನ್ನು ಮೋಸಗೊಳಿಸಲು ಬಳಸಲಾಗುವ ಸಾಮಾಜಿಕ ಎಂಜಿನಿಯರಿಂಗ್ ತಂತ್ರಗಳಿಗೆ ಫಿಶಿಂಗ್ ಒಂದು ಉದಾಹರಣೆಯಾಗಿದೆ

ಫಿಶಿಂಗ್ ಇಮೇಲ್ ಸಂದೇಶವು ಹೇಗೆ ಕಾಣುತ್ತದೆ? ವಿವರವಾಗಿ ತಿಳಿಯೋಣ

ಫಿಶರ್ಸ್ ಮಹಿಳೆಯರನ್ನು ಹೇಗೆ ಗುರಿಮಾಡುತ್ತಾರೆ?

ಫಿಶಿಂಗ್ ಆಕ್ರಮಣಗಳ ಮೂಲಕ ಮಹಿಳೆಯರನ್ನು ಸಿಕ್ಕಿಹಾಕಿಸುವುದು ಹೆಚ್ಚಾಗಿದೆ ಮತ್ತು ಇಡೀ ವ್ಯಕ್ತಿಯ ಭದ್ರತೆಗೆ ಅದು ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ. ಇಲ್ಲಿ ನಾವು ಮಹಿಳೆಯರಿಗೆ ಫಿಶಿಂಗ್ ಸಂಭವಿಸುವ ಕೆಲವು ವಿಧಾನಗಳನ್ನು ಪ್ರಸ್ತುತಪಡಿಸುತ್ತೇವೆ. ಸೌಂದರ್ಯವರ್ಧಕಗಳು, ತೂಕ ನಷ್ಟ ಕಾರ್ಯಕ್ರಮಗಳು, ಪೇರೆಂಟಲ್ ಕೇರ್ ಅಪ್ಲಿಕೇಶನ್ಗಳು, ಖಾತೆಯ ಮುಚ್ಚುವಿಕೆಯ ಮೇಲ್ಗಳು ಮುಂತಾದ ಕೆಲವು ದೌರ್ಬಲ್ಯ ಹೊಂದಿರುವ ಮಹಿಳೆಯರೇ ಫಿಶರ್ಸ್ ನ ಗುರಿ.

ಸೌಂದರ್ಯ ಉತ್ಪನ್ನಗಳ ಮೇಲೆ ಉತ್ತೇಜಕ ಕೊಡುಗೆಗಳು:

ಆನ್ಲೈನ್ ​​ಶಾಪಿಂಗ್ ಪೋರ್ಟಲ್ಗಳಲ್ಲಿನ ಶಾಪಿಂಗ್ ಟ್ರೆಂಡ್ಗಳಿಗಾಗಿ ಫಿಶರ್ಸ್ ಸಾಮಾನ್ಯವಾಗಿ ಪರಿಶೀಲಿಸುತ್ತಾರೆ. ಆ ಮಾಹಿತಿಯೊಂದಿಗೆ ಅವರು ಮಹಿಳೆಯರ ಗಮನವನ್ನು ಸೆಳೆಯುವ ಫಿಶಿಂಗ್ ಇಮೇಲ್ಗಳನ್ನು ಕಳುಹಿಸುತ್ತಾರೆ.ಅವರು ಸೌಂದರ್ಯ ಉತ್ಪನ್ನಗಳ ಮೇಲೆ ಕೊಡುಗೆಗಳನ್ನು ಇಮೇಲ್ನಲ್ಲಿ ಗ್ರಾಫಿಕ್ಸ್ ಬಳಕೆಯನ್ನು ನಂಬಲರ್ಹ ರೀತಿಯಲ್ಲಿ ನೀಡುತ್ತಾರೆ, ಅದು ನೈಜವಾದ ವೆಬ್ಸೈಟ್ಗಳಿಗೆ ಹೋಲುತ್ತದೆ ಆದರೆ ವಾಸ್ತವವಾಗಿ ನಿಮ್ಮನ್ನು ಅದು ವಂಚಿಸುವ ಸೈಟ್ಗಳು ಅಥವಾ ಕಾನೂನುಬದ್ಧವಾಗಿ ಕಾಣುವ ಪಾಪ್-ಅಪ್ ವಿಂಡೋಗಳಾಗಿ ತೆರೆದುಕೊಳ್ಳುತ್ತದೆ.

ಹೆಚ್ಚಿನ ಮಹಿಳೆಯರು ಸೌಂದರ್ಯವರ್ಧಕಗಳೆಂದರೆ ಹೆಚ್ಚು ಆಸಕ್ತಿ ಹೊಂದಿದ್ದು, ಅವರು ಫಿಶರ್ಗಳು ಮಾಡುವ ಟ್ರಿಕ್ಗೆ ಬೀಳುತ್ತಾರೆ. ಕೊಡುಗೆಯನ್ನು ಪಡೆದುಕೊಳ್ಳಲು ಮತ್ತು ಉತ್ಪನ್ನವನ್ನು ಖರೀದಿಸಲು ಅವರು ಫಿಶಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಹೀಗೆಯೇ ಅವರು ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗುವ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡು ಬಿಡುತ್ತಾರೆ.

  • ಪೋಷಕರ ಆರೈಕೆ / ಶೈಕ್ಷಣಿಕ ಅಪ್ಲಿಕೇಶನ್ಗಳ ಉಚಿತ ಅಳವಡಿಕೆ:

ತಾಯಂದಿರು ಸದಾ ತಮ್ಮ ಮಕ್ಕಳಿಗಾಗಿ ಅತ್ಯುತ್ತಮವಾಗಿರುವುದನ್ನು ಬಯಸುತ್ತಾರೆ. ವಂಚಕರು ಪುಟ್ಟ ಮತ್ತು ಹುಟ್ಟಿದ ಮಕ್ಕಳ ತಾಯಂದಿರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ. ಕೆಲವು ಜನಪ್ರಿಯ ವೆಬ್ಸೈಟ್ಗಳನ್ನು ನಕಲುಮಾಡುವುದರ ಮೂಲಕ ಅಥವಾ ಉಚಿತ ಅಪ್ಲಿಕೇಶನ್ ಸ್ಥಾಪನೆಯ ಲಿಂಕ್ನೊಂದಿಗೆ ಇಮೇಲ್ ಕಳುಹಿಸುವ ಮೂಲಕ ಇದು ಸಂಭವಿಸಬಹುದು. ಅವರು ಪ್ರಸಿದ್ಧ ಕಂಪನಿಗಳ ಹೆಸರುಗಳನ್ನು ಹೋಲುವ ಆದರೆ ಸ್ವಲ್ಪ ಮಾರ್ಪಾಡಾಗಿರುವ ವೆಬ್ ವಿಳಾಸಗಳನ್ನು ಬಳಸುತ್ತಾರೆ. ತಾಯಂದಿರ ಗಮನವನ್ನು ಸೆಳೆಯಲು ಪೋಷಕರ ಸಲಹೆಗಳ ಕುರಿತ ಮಾಹಿತಿಯನ್ನು ಈಮೇಲ್ ಹೊಂದಿರುತ್ತದೆ.

  • ಅವರು ನೀಡುವ ಸಂಪೂರ್ಣ ವಿಷಯವನ್ನು ಪರಿಶೀಲಿಸದೆಯೇ ಶೈಕ್ಷಣಿಕ ಅಪ್ಲಿಕೇಶನ್ಗಳನ್ನು ಖರೀದಿಸುವುದನ್ನು ತಪ್ಪಿಸಿ.
  • ಇತರ ಬಳಕೆದಾರು ನೀಡಿದ ವಿಮರ್ಶೆಗಳನ್ನು ಪರಿಶೀಲಿಸಿ ಪ್ರಸಿದ್ಧ ಉತ್ತಮ ಶೈಕ್ಷಣಿಕ ಅಪ್ಲಿಕೇಶನ್ಗಳ ಆಯ್ಕೆಯನ್ನು ಮಾಡಿರಿ.
  • ಪೋಷಕರ ಆರೈಕೆಯ ಅಪ್ಲಿಕೇಶನ್ಗಳೊಂದಿಗಿನ ಇಮೇಲ್ಗಳ ಮೂಲಕ ಫಿಶಿಂಗ್ ಮಾಡುವ ಬಗ್ಗೆ ಎಚ್ಚರವಿರಲಿ

ಬೆದರಿಕೆ ಮೇಲ್ಗಳು:

ನೀವು ಇ-ಮೇಲ್ ಸಂದೇಶಕ್ಕೆಪ್ರತಿಕ್ರಿಯಿಸದಿದ್ದರೆ ನಿಮ್ಮ ವೆಬ್ಮೇಲ್ ಖಾತೆಯನ್ನು ಮುಚ್ಚಲಾಗುವುದು ಎಂದು ಕೆಲವೊಮ್ಮೆ ನಿಮಗೆ ಬೆದರಿಕೆ ಮೇಲ್ ಅನ್ನು ಬರಬಹುದು. ಮೇಲೆ ತೋರಿಸಿರುವ ಇ-ಮೇಲ್ ಸಂದೇಶವು ಒಂದು ;ರೀತಿಯ ಟ್ರಿಕ್ಕಿ ನ ಉದಾಹರಣೆಯಾಗಿದೆ. ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಭದ್ರತೆಯು ರಾಜಿಯಾಗಿದೆಯೆಂದು ನಂಬುವಂತೆ ತಂತ್ರಗಳನ್ನು ಬಳಸುತ್ತಾರೆ. ಸೈಬರ್ ಅಪರಾಧಿಗಳು ನಿಮ್ಮ ಫೋನಿಗೆ ಕರೆ ಮಾಡಬಹುದು ಮತ್ತು ನಿಮ್ಮ ಕಂಪ್ಯೂಟರ್ ಸಮಸ್ಯೆಗಳನ್ನು ಪರಿಹರಿಸಲು ಅಥವಾ ನಿಮಗೆ ಸಾಫ್ಟ್ವೇರ್ ಪರವಾನಗಿಯನ್ನು ಮಾರಾಟ ಮಾಡಲು ಸಹಾಯ ಮಾಡಬಹುದು.

ಅದು ಹೇಗೆ ಸಂಭವಿಸಬಹುದು?

 ಹಂತ 1:

ಬ್ರೌಸರ್ ನ  URL ಅನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ.

ಸಂಖ್ಯೆಗಳೊಂದಿಗೆ ಪ್ರಾರಂಭವಾಗುವ ವೆಬ್ಸೈಟ್ಗಳಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸಬೇಡಿ.

 ಹಂತ 2:

URL ತಪ್ಪಾಗಿ ಬರೆಯಲಾಗಿದೆಯೇ ಎಂದು ಸದಾ  ಪರಿಶೀಲಿಸಿ.

ಆದ್ದರಿಂದ, ವಿಳಾಸ ಪಟ್ಟಿಯಲ್ಲಿನ URL ಅನ್ನು ಟೈಪ್ ಮಾಡಿ ಮತ್ತು  ಎಂದೂ ಕಾಪಿ ಮತ್ತು ಪೇಸ್ಟ್ ಮಾಡಬೇಡಿ.

 ಹಂತ 3:

ಸುರಕ್ಷಿತ ಚಾನೆಲ್ನಲ್ಲಿ ಯಾವಾಗಲೂ ಆನ್ಲೈನ್ ​​ಬ್ಯಾಂಕಿಂಗ್ ಅನ್ನು ನಿರ್ವಹಿಸಿ ಅಂದರೆ  ಸುರಕ್ಷಿತ ಬ್ಯಾಂಕಿಂಗ್ಗಾಗಿ ಪಡ್ಲಾಕ್ ಮತ್ತು ಸುರಕ್ಷಿತ ಚಾನೆಲ್ ಅನ್ನು  ಪರಿಶೀಲಿಸಿ

ವಿಶ್ವಾಸಾರ್ಹ ವೆಬ್ ಸೈಟ್ ನಲ್ಲಿ Https ಮತ್ತು ಪ್ಯಾಡ್ಲಾಕ್ ಹೊಂದಿದೆಯೇ ಎಂದು ಯಾವಾಗಲೂ ಪರಿಶೀಲಿಸಿ

ಹಂತ 4:

ಆರ್ಥಿಕ ಅಥವಾ ಇತರ ವೈಯಕ್ತಿಕ ಮಾಹಿತಿಯ  ಯಾವುದೇ ಇಮೇಲ್ ವಿನಂತಿಯನ್ನು, ವಿಶೇಷವಾಗಿ "ತುರ್ತು" ವಿನಂತಿಗಳನ್ನು ಸದಾ ಅನುಮಾನದೊಂದಿಗೆ ಪರಿಶೀಲಿಸಿ. ಸಂದೇಹ ಬಂದಲ್ಲಿ, ಪ್ರಶ್ನಾರ್ಹ ಇಮೇಲ್ಗೆ ಪ್ರತಿಕ್ರಿಯಿಸಬೇಡಿ ಅಥವಾ ಪ್ರಶ್ನಾರ್ಹ ವೆಬ್ಸೈಟ್ಗಳಲ್ಲಿ ಮಾಹಿತಿಯನ್ನು ನಮೂದಿಸಬೇಡಿ. ನೀವು ಸ್ವೀಕರಿಸಿದ ಸಂವಹನಗಳ ನ್ಯಾಯಸಮ್ಮತತೆಯನ್ನು ದೃಢೀಕರಿಸಲು ನೀವು ಆರೋಪಿ ಎಂದೆನಿಸಿದ ಕಳುಹಿಸುಗಾರರನ್ನು ಕೂಡ ಸಂಪರ್ಕಿಸಬಹುದು.

ಫಿಶಿಂಗ್ ಸೈಟ್ನ ಒಂದು ಉದಾಹರಣೆ, ಪಂಜಾಬ್ ರಾಷ್ಟ್ರೀಯ ಬ್ಯಾಂಕ್ನ ಎಬ ಸೈಟ್ ನೋಟ ಮತ್ತು ಅನುಭವ ಒಂದೇ ಆಗಿದೆ.

ಹಂತ 5:  

ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಬ್ಯಾಂಕ್ ಮಾಹಿತಿಯಂತಹ ನಿಮ್ಮ ವೈಯಕ್ತಿಕ ಮಾಹಿತಿಗಾಗಿ ಕೇಳುವ ಇಮೇಲ್ಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ

Page Rating (Votes : 0)
Your rating: