ನಿಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಮತ್ತು ಹೊಸ ಸ್ನೇಹಿತರನ್ನು ಸಂಪರ್ಕಿಸಲು ಸಾಮಾಜಿಕ ನೆಟ್ವರ್ಕಿಂಗ್ ಒಂದು ಮಾರ್ಗವಾಗಿದೆ. ಸಾಮಾಜಿಕ ನೆಟ್ವರ್ಕ್ಗಳು ಮೋಜು, ಉದ್ಯೋಗ ಬೇಟೆಗೆ ಸಹಾಯಕವಾಗಿದೆ ಮತ್ತು ಸ್ನೇಹಿತರೊಂದಿಗೆ, ವ್ಯಾಪಾರ ಸಂಪರ್ಕಗಳು ಮತ್ತು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರಲು ಮತ್ತು ಎಲ್ಲಿಯಾದರೂ ಎನನ್ನಾದರೂ ಹಂಚಿಕೊಳ್ಳಲು ಉತ್ತಮವಾಗಿದೆ. ತಮ್ಮ ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳು ಮತ್ತು ಅವರ ಅನುಭವ, ಜ್ಞಾನ ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಮಹಿಳೆಯರು ಸಾಮಾನ್ಯ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳನ್ನು ಬಳಸಬಹುದು. ತಾಯ್ತನದ ಮೂಲಕ ಪರಸ್ಪರ ಬೆಂಬಲಿಸಲು, ತಮ್ಮ ವೃತ್ತಿಜೀವನದ ಗುರಿಗಳನ್ನು ಪೂರೈಸಲು, ಪರಸ್ಪರ ಪ್ರೇರೇಪಿಸಲು ಅಥವಾ ಆಸಕ್ತಿಯನ್ನು ಹಂಚಿಕೊಳ್ಳಲು ಇತರರ ಆಸಕ್ತಿಯನ್ನು ಕಂಡುಕೊಳ್ಳಲು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳನ್ನು ಬಳಸಬಹುದು.
ಈ ಮಹಿಳೆಯರು ಪೋಷಕ, ವೃತ್ತಿಪರರು ಅಥವಾ ಸಾಮಾನ್ಯ ಬಳಕೆದಾರರಾಗಬಹುದು ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳ ಸಹಾಯದಿಂದ ಅವರು ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಹೆಚ್ಚು ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಮತ್ತು ಇತರರ ಆಲೋಚನೆಗಳನ್ನು ಪಡೆಯಬಹುದು ಇತರರಿಗೆ ಸಹಾಯ ಮಾಡಬಹುದಾದ ಉತ್ತಮ ಚಿಂತನೆಯನ್ನು ದೊಡ್ಡ ನೆಟ್ವರ್ಕ್ ಮೂಲಕ ಅನೇಕ ಜನರಿಗೆ ತಲುಪಿಸಬಹುದು. ಮಹಿಳೆಯರು ಉದ್ಯಮಿಯಾಗಿರಬಹುದು; ಸಾಮಾಜಿಕ ನೆಟ್ವರ್ಕಿಂಗ್ ಮೂಲಕ ತಮ್ಮ ವ್ಯಾಪಾರವನ್ನು ಹರಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು. ಮಹಿಳೆಯರು ಬಳಸಿಕೊಳ್ಳಬಹುದಾದ ಫೇಸ್ಬುಕ್, ವಾಟ್ಸಾಪ್, ಟ್ವಿಟರ್ ಮುಂತಾದ ಅನೇಕ ಸಾಮಾಜಿಕ ಜಾಲತಾಣಗಳು ಇವೆ.
ಖಾಸಗಿ ವಿಷಯಗಳು:
ನೀವು ಕೆಲವು ಗೌಪ್ಯತೆ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ನೀವು ಅಪಾಯಕ್ಕೆ ಒಳಗಾಗಬಹುದಾಗಿದೆ -
- ನಿಮ್ಮ ಫೋಟೋಗಳು ಮತ್ತು ಚಟುವಟಿಕೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು.
- ನಿಮ್ಮ ಪೋಸ್ಟ ನಲ್ಲಿ ನಿಮ್ಮ ಸ್ಥಾನವನ್ನು ಹಂಚಿಕೊಳ್ಳುವುದು ನಿಮ್ಮ ಸ್ಥಳವನ್ನು ಪತ್ತೆ ಹಚ್ಚಲು ಸ್ಕೇಮರ್ಗಳಿಗೆ ಅವಕಾಶ ನೀಡುತ್ತದೆ.
- ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಯಾವುದೇ ಗುರುತಿಲ್ಲದ ನಿಮಗೆ ಗೊತ್ತಿಲ್ಲದ ಸ್ನೇಹಿತರನ್ನು ಸೇರಿಸುವುದು ನಿಮಗೆ ಅಪಾಯವಾಗಬಹುದು.
ಅಪಾಯಗಳು ಮತ್ತು ಸವಾಲುಗಳು
ನಕಲಿ ಸ್ನೇಹಿತರು:
ನಿಮಗೆ ವೈಯಕ್ತಿಕವಾಗಿ ಗೊತ್ತಿರದ ಅನಾಮಧೇಯ ವ್ಯಕ್ತಿಯನ್ನು ನೀವು ಸ್ನೇಹಿತರಾಗಿ ಸೇರಿಸಿದರೆ ಅವರು ಈ ಕೆಳಗಿನವನ್ನು ಮಾಡಬಹುದಾಗಿದೆ.
- ಫೋಟೋಗಳನ್ನು ಕದಿಯಬಹುದು ಅಥವಾ ನಿಮ್ಮ ಚಟುವಟಿಕೆಗಳನ್ನು ಗೂಡಾಚಾರ ಮಾಡಬಹುದು.
- ಅವರ ನಿಮ್ಮ ಹೆಸರಿನ ಆಧಾರದ ಮೇಲೆ ನಕಲಿ ಪ್ರೊಫೈಲ್ ಮಾಡಬಹುದು ಮತ್ತು ಅವರ ವೈಯಕ್ತಿಕ ಲಾಭಕ್ಕಾಗಿ ನಿಮ್ಮ ಗುರುತನ್ನು ಹಾನಿಗೊಳಿಸಬಹುದು.
- ಅವರು ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ನಿಮಗೆ ಬೆದರಿಕೆ ಹಾಕಬಹುದು ಅಥವಾ ನಿಮ್ಮನ್ನು ದೂಷಿಸಬಹುದು.
ಗುರುತಿನ ಕಳ್ಳತನ
ಸಾಮಾಜಿಕ ನೆಟ್ವರ್ಕ್ ಅನ್ನು ಬಳಸುವಾಗ ನೀವು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳಲ್ಲಿ ಅಪರಿಚಿತ ಸ್ನೇಹಿತರನ್ನು ಮಾಡಿಕೊಂಡರೆ ನೀವು ಗುರುತಿನ ಕಳ್ಳತನದ ಸಮಸ್ಯೆಯನ್ನು ಎದುರಿಸಬಹುದು. ಸ್ಕ್ಯಾಮರ್ ಗಳು ಈ ಕೆಳಗಿನವುಗಳನ್ನು ಮಾಡಬಹುದಾಗಿದೆ.
- ನಿಮ್ಮ ಸೂಕ್ಷ್ಮ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು.
- ಹಣವನ್ನು ಪಡೆಯುವುದಕ್ಕಾಗಿ ನಿಮ್ಮ ಗುರುತನ್ನು ಬಳಸಿ, ನಿಮ್ಮ ಗುರುತಿನ ಮೂಲಕ ಸೋಗುಹಾಕಿ ಹಣಕೀಳುವುದು.
ನಿಂದನೀಯ, ಅಸಭ್ಯ ಅಥವಾ ಅಸಹ್ಯಕರ ಭಾಷೆ:
ನಿಂದನಾತ್ಮಕ, ಅಸಭ್ಯ ಅಥವಾ ಅಸಹ್ಯಕರ ಭಾಷೆಗಳು ಇಂದು ಮಹಿಳೆಯರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು, ಅನೇಕ ನಕಲಿ ಸ್ನೇಹಿತರು ನಿಮ್ಮೊಂದಿಗೆ ಅಸಭ್ಯ ವಿಷಯಗಳ ಬಗ್ಗೆ ಮಾತನಾಡಬಹುದು ಮತ್ತು ಅವರು
- ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ನಿಮಗೆ ಕಿರುಕುಳ ನೀಡಬಹದು.
- ನಿಮ್ಮ ಪೋಸ್ಟ್ ಅಥವಾ ಫೋಟೋದಲ್ಲಿ ನಿಂದನೀಯ ಪದಗಳನ್ನು ಬಳಸಿ ನಿಮ್ಮನ್ನು ದೂಷಿಸಬಹುದು.
ಮಾಹಿತಿಯನ್ನು ಹೆಚ್ಚಾಗಿ ಹಂಚಿಕೊಳ್ಳುವುದು
- ನಿಮ್ಮ ಮನೆ / ಕಚೇರಿ ವಿಳಾಸ, ಕುಟುಂಬ ಸಂಬಂಧ, ಫೋನ್ ಸಂಖ್ಯೆ ಮುಂತಾದ ನಿಮ್ಮ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ನೀವು ಅಪಾಯಯವನ್ನು ಎದುರಿಸುವಂತೆ ಮಾಡಬಹುದು. ಸ್ಕ್ಯಾಮಾರ್ ಗಳು ನಿಮ್ಮನ್ನು ಅನುಸರಿಸಬಹುದು ಅಥವಾ ನಿಮ್ಮನ್ನು ಸ್ಟ್ಯಾಕ್ ಮಾಡಬಹುದು.
ಸ್ಪ್ಯಾಮ್ ಇ-ಮೇಲ್ಗಳು
ಮುಗ್ದ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಇ-ಮೇಲ್ಗಳ ಅಥವಾ ಇ-ಮೇಲ್ ವಿಳಾಸಗಳ ಗುಂಪಿಗೆ ಕಳುಹಿಸುವ ಉತ್ಪನ್ನದ ಬಗೆಗಿನ ಅನಗತ್ಯವಾದ ಇ-ಮೇಲ್ ಜಾಹೀರಾತು ಸ್ಪ್ಯಾಮ್ ಇ-ಮೇಲ್ ಆಗಿದೆ.
ಸ್ಪ್ಯಾಮ್ ಇ-ಮೇಲ್ ಈ ಕೆಳಗಿನ ವಿಷಯದ ಮೇಲೆ ಕಳುಹಿಸಬಹುದು
- ಕೆಲವು ಆನ್ಲೈನ್ ಶಾಪಿಂಗ್ ಉತ್ಪನ್ನಗಳು, ಆರೋಗ್ಯ ವಿಮೆ.
- ಕೆಲವು ನಕಲಿ ಉದ್ಯೋಗ ಸಂದರ್ಶನಗಳಿಗಾಗಿ
- ಮನೆ ಉಪಕರಣಗಳ ಕೆಲವು ವಿಶೇಷ ಕೊಡುಗೆಗಳಿಗಾಗಿ.
ಸ್ಪ್ಯಾಮ್ ಇ-ಮೇಲ್ಗಳಲ್ಲಿ ನೀಡಲಾದ ದುರುದ್ದೇಶಪೂರಿತ ಲಿಂಕ್ಗಳನ್ನು ನೀವು ಕ್ಲಿಕ್ ಮಾಡಿದರೆ, ಸ್ಕ್ಯಾಮರ್ ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಬಹುದಾಗಿರುತ್ತದೆ.
ನಕಲಿ ಜಾಹಿರಾತು
ಉತ್ಪನ್ನದ ನಕಲಿ ಜಾಹಿರಾತುಗಳಿಗಾಗಿ ಸ್ಕ್ಯಾಮರ್ನಿಂದ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ಗಳು ಪ್ರಮುಖವಾಗಿ ಗುರಿಯಾಗುತ್ತವೆ. ಅವರು ನಿಮ್ಮನ್ನು ಗುರಿಮಾಡಬಹುದು ಮತ್ತು ಈ ಕೆಳಗಿನ ವಿಷಯಗಳನ್ನು ಮಾಡುವುದರ ಮೂಲಕ ನಿಮ್ಮ ರುಜುವಾತುಗಳನ್ನು ಕದಿಯಬಹುದು
- ನಕಲಿ ಜಾಹೀರಾತನ್ನು ಅಸಲಿ ಜಾಹೀರಾತಿನಂತೆ ಪ್ರತಿನಿಧಿಸುವ ಮೂಲಕ ದುರುದ್ದೇಶಪೂರಿತ ಲಿಂಕ್ ಕಳಿಸಿ, ನೀವು ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಸೂಕ್ಷ್ಮ ಮಾಹಿತಿಯು ಅಪಾಯಕ್ಕೆ ಈಡಾಗುತ್ತದೆ.
- ನೀವು ಆ ಅಪ್ಲಿಕೇಶನ್ಗಳನ್ನು ಸ್ಥಾಪಿಸಿದರೆ ಅದರ ಮೂಲಕ ನಕಲಿ ಅಪ್ಲಿಕೇಶನ್ ಮತ್ತು ಸೇವೆಗಳ ಮೂಲಕ ಅವರು ನಿಮ್ಮ ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು.
ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳನ್ನು ಬಳಸುವಾಗ ಮಹಿಳೆಯರು ಏನು ಮಾಡಬೇಕು:
- ನೀವು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳಲ್ಲಿ ವಿನಂತಿಯನ್ನು ಸ್ವೀಕರಿಸುವ ಮೊದಲು ವ್ಯಕ್ತಿಯ ದೃಢೀಕರಣವನ್ನು ಯಾವಾಗಲೂ ಪರಿಶೀಲಿಸಿ.
- ನಿಮ್ಮ ಕುಟುಂಬಗಳು ಮತ್ತು ತಿಳಿದ ಸ್ನೇಹಿತರ ಜೊತೆ ಮಾತ್ರ ನಿಮ್ಮ ಫೋಟೋಗಳು ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವಂತಹ ಕೆಲವು ಗೌಪ್ಯತೆ ಸೆಟ್ಟಿಂಗ್ಗಳನ್ನು ಇರಿಸಿ.
- ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಆಯ್ಕೆ ಮಾಡುವಾಗ, ಗೌಪ್ಯತೆ ಸಮಸ್ಯೆಗಳನ್ನು ಪರಿಗಣಿಸಬೇಕು, ನೀವು ಪೋಸ್ಟ್ ಮಾಡುವ ಮೊದಲು, ಚಾಟ್, ಅಪ್ಲೋಡ್ ಅಥವಾ ಡೌನ್ಲೋಡ್ ಮಾಡುವ ಮೊದಲು ಯೋಚಿಸಬೇಕು.
- ನೀವು ನೆಟ್ವರ್ಕಿಂಗ್ ಸೈಟ್ನಲ್ಲಿ ಭೇಟಿ ಮಾಡಿದ ವ್ಯಕ್ತಿಯನ್ನು ಭೇಟಿ ಮಾಡಲು ಬಯಸಿದರೆ, ನಿಮ್ಮ ತಂದೆ / ಗಂಡ / ಸಹೋದರನ ಅಥವಾ ಯಾವುದೇ ಕುಟುಂಬದ ಸದಸ್ಯರ ಸಲಹೆಗಳನ್ನು ಪಡೆಯಿರಿ ಮತ್ತು ನೀವು ಯಾರನ್ನು ಭೇಟಿ ಮಾಡುತ್ತೀರಿ ಎಂದು ಆರಿಗೆ ತಿಳಿದಿರುತ್ತದೆ.
- ನಿಮ್ಮ ಸಾಮಾಜಿಕ ನೆಟ್ವರ್ಕಿಂಗ್ ಖಾತೆಯ ವಿವರಗಳನ್ನು ರಾಜಿಮಾಡಲಾಗಿದೆ ಅಥವಾ ಕಳವು ಮಾಡಲಾಗಿದೆ ಎಂದು ನೀವು ಭಾವಿಸಿದರೆ, ನಿಮ್ಮ ಅನುಮಾನಗಳನ್ನು ತಕ್ಷಣ ನೆಟ್ವರ್ಕಿಂಗ್ ಸೈಟ್ ಬೆಂಬಲ ತಂಡಕ್ಕೆ ವರದಿ ಮಾಡಿ.
- ನಿಮ್ಮ ಪ್ರೊಫೈಲ್ನಲ್ಲಿ ಪೋಸ್ಟ್ ಮಾಡಿದ ಕಿರುಕುಳ ಅಥವಾ ಅಸಭ್ಯ ಕಾಮೆಂಟ್ಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ.
ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳನ್ನು ಬಳಸುವಾಗ ಮಹಿಳೆಯರು ಏನನ್ನು ದೂರವಿಡಬೇಕು:
- ನಿಮ್ಮ ಹೆಸರು, ಕಂಪನಿ / ಮನೆ, ಫೋನ್ ಸಂಖ್ಯೆಗಳು, ವಯಸ್ಸು, ಲಿಂಗ, ಕ್ರೆಡಿಟ್ ಕಾರ್ಡ್ ವಿವರಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀಡಬೇಡಿ ಅಥವಾ ಪೋಸ್ಟ್ ಮಾಡಬೇಡಿ.
- ಯಾರಿಗೂ ನಿಮ್ಮ ಗುಪ್ತಪದವನ್ನು ನೀಡಬೇಡಿ.
- ನಿಮ್ಮ ಸ್ನೇಹಿತರ ಮಾಹಿತಿಯನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ, ಇದರಿಂದ ಅವರನ್ನು ಅಪಾಯದಲ್ಲಿರಿಸಿದಂತಾಗುತ್ತದೆ.
- ನಿಮಗೆ ಗೊತ್ತಿಲ್ಲದ ಜನರೊಂದಿಗೆ ವೆಬ್ಕ್ಯಾಮ್ ಅನ್ನು ಬಳಸಬೇಡಿ.
- ನೀವು ನೆಟ್ವರ್ಕಿಂಗ್ ಸೈಟ್ಗಳಲ್ಲಿ, ಮುಂದೆ ಮಾಡಲು ಹೋಗುವ ಯೋಜನೆಗಳು ಮತ್ತು ಚಟುವಟಿಕೆಗಳನ್ನು ಪೋಸ್ಟ್ ಮಾಡುವುದನ್ನು ತಪ್ಪಿಸಿ.
- ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳ ಮೂಲಕ ನೀವು ಪಡೆಯುತ್ತಿರುವ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ನೀವು ಸೈಟ್ಗೆ ಭೇಟಿ ನೀಡಲು ಬಯಸಿದಲ್ಲಿ ನಂತರ ಮೂಲ ವೆಬ್ಸೈಟ್ಗಳ ಮೂಲಕ ನೇರವಾಗಿ ಹೋಗಿ ನೋಡಿ.
ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳಲ್ಲಿ ನಿಮ್ಮ ಗೌಪ್ಯತೆ ಸೆಟ್ಟಿಂಗ್ಗಳನ್ನು ನೀವು ಹೇಗೆ ನಿಯಂತ್ರಿಸಬಹುದು?
ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳಲ್ಲಿ, ಪೂರ್ವನಿಯೋಜಿತವಾಗಿ (ಡಿಫಾಲ್ಟ್ ಆಗಿ) ಪ್ರತಿ ವಿಷಯವೂ ಸಾರ್ವಜನಿಕವಾಗಲಿದೆ, ನಿಮ್ಮ ಭದ್ರತೆಗಾಗಿ ಅವರು ಹೆಚ್ಚಿನ ಗೌಪ್ಯತೆ ಸೆಟ್ಟಿಂಗ್ಗಳನ್ನು ನೀಡುವುದರಿಂದ, ಆನ್ಲೈನ್ನಲ್ಲಿ ಹಲವಾರು ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಲು ನೀವು ಎಲ್ಲಾ ಸೌಲಭ್ಯಗಳನ್ನು ಬಳಸಬೇಕು.
- ನಿಮ್ಮ ಪೋಸ್ಟ್ / ವೀಡಿಯೋಗಳು / ಚಟುವಟಿಕೆಯನ್ನು ಅಪರಿಚಿತರಿಂದ ನೀವು ನಿರ್ಬಂಧಿಸಬಹುದು ಮತ್ತು ನಿಮ್ಮ ಸಂಪರ್ಕದಲ್ಲಿನ ನಿಮ್ಮ ಸದಸ್ಯರಿಗೆ ಮಾತ್ರ ಗೌಪ್ಯತೆ ಸೆಟ್ಟಿಂಗ್ಗಳ ಮೇಲಿನ ಕೇವಲ ನಾನು (ಓನ್ಲಿ ಮಿ) ಆಯ್ಕೆಯನ್ನು ಮಾಡಿ ಕೊಳ್ಳಬಹುದು.
- ನೀವು ಸ್ನೇಹಿತ ವಿನಂತಿಯ ಆಯ್ಕೆಯನ್ನು ನಿಷ್ಕ್ರಿಯಗೊಳಿಸಬಹುದು, ಆದ್ದರಿಂದ ಯಾರ್ಯಾರಿಂದಲೋ ಬರುವ ಸ್ನೇಹಿತ ವಿನಂತಿಯನ್ನು ತಪ್ಪಿಸಬಹುದು.
- ನೀವು ಸಾರ್ವಜನಿಕರಿಂದ ಕಾಮೆಂಟ್ ವಿಭಾಗವನ್ನು ನಿರ್ಬಂಧಿಸಬಹುದು, ಆದ್ದರಿಂದ ನಿಮ್ಮ ಸಂಪರ್ಕದಲ್ಲಿರುವ ಸದಸ್ಯರು ಮಾತ್ರ ನಿಮ್ಮ ಚಟುವಟಿಕೆಯ ಬಗ್ಗೆ ಕಾಮೆಂಟ್ ಮಾಡಬಹುದು.
- ನಿಮ್ಮ ವೈಯಕ್ತಿಕ / ವೃತ್ತಿಪರ ಮಾಹಿತಿಯನ್ನು ಅಪರಿಚಿತರಿಂದ ನಿರ್ಬಂಧಿಸಬಹುದು.
- ನೀವು ಆನ್ಲೈನ್ ಮೋಡ್ ಆಫ್ ಮಾಡಬಹುದು ಆದ್ದರಿಂದ ನೀವು ಆನ್ಲೈನ್ನಲ್ಲಿ ಎಷ್ಟು ಸಮಯದವರೆಗೆ ಇರುತ್ತೀರಿ ಎಂಬುದನ್ನು ಯಾರೂ ತಿಳಿಯಲು ಆಗುವುದಿಲ್ಲ.
Source: