ವೈ-ಫೈ ಎಲ್ಲರಿಗೂ ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿಹೋಗಿದೆ. ಅಂತರ್ಜಾಲ ಬಳಕೆದಾರರು ವಿಶೇಷವಾಗಿ ಮಹಿಳೆಯರು ತಮ್ಮ ಮನೆಗಳಲ್ಲಿ ಮತ್ತು ವ್ಯವಹಾರಮಾಡುವಾಗ, ಶಾಪಿಂಗ್ ಮಾಡಲು, ಬ್ಯಾಂಕ್, ದೈನಂದಿಕ ಜೀವನವನ್ನು ಇತರರೊಂದಿಗೆ ನಿರ್ವಹಿಸಲು, ಸುತ್ತಮುತ್ತಲಿನ ವಿಷಯದ ಅರಿವಿಗಾಗಿ ವೈ-ಫೈ ಸಾಧನಗಳನ್ನು ಅವಲಂಬಿಸಿದ್ದಾರೆ. ವೈಯಕ್ತಿಕ ಮಾಹಿತಿಯನ್ನು ಭದ್ರಪಡಿಸಲು ವೈ-ಫೈ ಸಂಪರ್ಕಗಳನ್ನು ಸುರಕ್ಷಿತಗೊಳಿಸುವುದು ಪ್ರಮುಖವಾಗಿದೆ. ಕೆಲವೊಂದು ವೈರ್ ಲೆಸ್ (ನಿಸ್ತಂತು) ಸಾಧನಗಳು ತಮ್ಮ ಡಿಫಾಲ್ಟ್ (ಪೂರ್ವನಿಯೋಜಿತ) ಸಂರಚನಾ ಕ್ರಮದಲ್ಲಿ ದುರ್ಬಲವಾಗುತ್ತವೆ. ಅಂತಿಮ ಬಳಕೆದಾರರಾದ ವಿಶೇಷವಾಗಿ ಮಹಿಳೆಯರು, ಈ ಸಾಧನಗಳಲ್ಲಿ ಇರಬೇಕಾದ ಭದ್ರತಾ ಹಂತಗಳ ಬಗ್ಗೆ ಸಂಪೂರ್ಣವಾದ ಅರಿವಿಲ್ಲದೆ, ಸೈಬರ್ ಬೆದರಿಕೆಗೆ ಸುಲಭವಾಗಿ ಹಾನಿಗೊಳಗಾಗಬಹುದು. ಸೈಬರ್ ಅಪರಾಧಿಗಳು ತಮ್ಮ ಅಕ್ರಮ ಉದ್ದೇಶಗಳಿಗಾಗಿ ಈ ಅಸುರಕ್ಷಿತ ವೈ-ಫೈ ಸಾಧನಗಳನ್ನು ಹುಡುಕುತ್ತಾರೆ.
ವೈಫೈ ಮೂಲಕ ಕಂಪ್ಯೂಟರ್, ಲ್ಯಾಪ್ಟಾಪ್ ಅಥವಾ ಮೊಬೈಲ್ ಅನ್ನು ಸಂಪರ್ಕಿಸುವ ಯಾರಾದರೂ ಅಸುರಕ್ಷಿತ ಆಕ್ಸೆಸ್ ಪಾಯಿಂಟ್ (ಪ್ರವೇಶ ಬಿಂದು)ಗಳಿಗೆ ನಿಸ್ತಂತು ಮಾರ್ಗನಿರ್ದೇಶಕಗಳು (ವೈರ್ ಲೆಸ್ ರೂಟರ್ಸ್) ಸಂಪರ್ಕ ಸಾಧಿಸಬಹುದಾಗಿದೆ. ಪ್ರವೇಶ ಬಿಂದುವನ್ನು ಡೀಫಾಲ್ಟ್ ಸೆಟ್ಟಿಂಗ್ಗಳೊಂದಿಗೆ ಕಾನ್ಫಿಗರ್ ಮಾಡಿದ್ದರೆ ಅಥವಾ ಅದು ಅಸುರಕ್ಷಿತವಾದುದಾದರೆ, ವ್ಯಾಪ್ತಿಯಲ್ಲಿರುವ ಯಾರಾದರೂ ಅದನ್ನು ನೇರವಾಗಿ ಸಂಪರ್ಕಿಸಬಹುದು. ಅಸುರಕ್ಷಿತ ಜಾಲವನ್ನು ಬಳಸಿಕೊಂಡು ಸಂಪರ್ಕವನ್ನು ಸ್ಥಾಪಿಸಿದ ನಂತರ, ದಾಳಿಕೋರರು ಮೇಲ್ಗಳನ್ನು ಕಳುಹಿಸಬಹುದು, ವರ್ಗೀಕೃತ / ಗೌಪ್ಯ ವಿಷಯವನ್ನು ಡೌನ್ಲೋಡ್ ಮಾಡಬಹುದು, ನೆಟ್ವರ್ಕ್ನಲ್ಲಿನ ಇತರ ಕಂಪ್ಯೂಟರ್ಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಬಹುದು, ದುರುದ್ದೇಶಪೂರಿತ ಕೋಡ್ ಅನ್ನು ಇತರರಿಗೆ ಕಳುಹಿಸಬಹುದು, ಬಲಿಪಶುವಾದ ಕಂಪ್ಯೂಟರ್ನಲ್ಲಿ ದೀರ್ಘಕಾಲದವರೆಗೆ ನಿಯಂತ್ರಣ ಪಡೆಯಲು ಟ್ರೋಜನ್ ಅಥವಾ ಬೋಟ್ನೆಟ್ ಅನ್ನು ಸ್ಥಾಪಿಸಬಹುದಾಗಿದೆ.
ಉಚಿತ ವೈ-ಫೈ ಹಾಟ್ ಸ್ಪಾಟ್ ಗಳು ಸೈಬರ್ ದಾಳಿಗೆ ಹೆಚ್ಚಾಗಿ ಗುರಿಯಾಗುವ ಸಾಧ್ಯತೆ.
ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ವೈ-ಫೈ ಲಭ್ಯವಿದ್ದರೆ ಹೆಚ್ಚಿನ ಮಹಿಳೆಯರು ತಮ್ಮ ನೆಚ್ಚಿನ ಸಾಮಾಜಿಕ ಮಾಧ್ಯಮ ಅಥವಾ ಚಾಟ್ ಮಾಡುವ ಅಪ್ಲಿಕೇಶನ್ಗಳನ್ನು ಬಳಸಲು ಮನಸ್ಸು ಮಾಡುತ್ತಾರೆ. ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿನ ಸಾರ್ವಜನಿಕ ನಿಸ್ತಂತು ಕಂಪ್ಯೂಟರ್ ನೆಟ್ವರ್ಕ್ ಮೂಲಕ ಇಂಟರ್ನೆಟ್ ಬ್ರೌಸಿಂಗ್ ಮಾಡುವುದು, ಸೈಬರ್ ದಾಳಿಗಳಿಗೆ ಅವಕಾಶ ನೀಡಿದಂತಾಗುತ್ತದೆ. ಈ ಅವಕಾಶಗಳ ಯಶಸ್ವಿ ದುರ್ಬಳಕೆಯ ಮೂಲಕ ಆಕ್ರಮಣಕಾರರು ಕ್ರೆಡಿಟ್ ಕಾರ್ಡ್ ಸಂಖ್ಯೆಗಳು, ಪಾಸ್ವರ್ಡ್ಗಳು, ಚಾಟ್ ಸಂದೇಶಗಳು, ಇಮೇಲ್ಗಳು ಮುಂತಾದ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಬಳಕೆದಾರರು ಸಾರ್ವಜನಿಕ ವೈ-ಫೈ ಯನ್ನು ಉಪಯೋಗಿಸದೆ ಬದಲಿಗೆ ಸುರಕ್ಷಿತ ನೆಟ್ವರ್ಕ್ಗಳನ್ನು ಮಾತ್ರ ಬಳಸುವುದು ಸೂಕ್ತ. ಉಚಿತ ಸಾರ್ವಜನಿಕ ವೈ-ಫೈ ಬಳಸುವಾಗ ಗಮನಿಸಬೇಕಾದ ಕೆಲವು ಅಂಶಗಳು
- ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ನೆಟ್ವರ್ಕ್ಗಳನ್ನು ಸಂಪರ್ಕಿಸುಂತೆ ಎಂದಿಗೂ ಫೋನ್ ನನ್ನು ಆಟೋ-ಕನೆಕ್ಟ್ ಮಾಡಬೇಡಿ.
- ಸಾರ್ವಜನಿಕ ವೈ-ಫೈ ಬಳಸುವಾಗ ಸುರಕ್ಷಿತ ವೆಬ್ಸೈಟ್ಗಳಿಗೆ ಮಾತ್ರ ಭೇಟಿ ನೀಡಿ
- ಮಾಹಿತಿ ಹಂಚಿಕೆಯನ್ನು ನಿಷ್ಕ್ರಿಯಗೊಳಿಸಿ
- ನೀವು ಅಗತ್ಯವಿಲ್ಲದಿದ್ದಾಗ ವೈ-ಫೈ ಅನ್ನು ಆಫ್ ಮಾಡಿ.
- ಸೂಕ್ಷ್ಮ ಪಾಸ್ವರ್ಡ್ಗಳನ್ನು ಬಳಸಬೇಡಿ.
ವ್ಯಕ್ತಿಯನ್ನು ಟ್ರ್ಯಾಕ್ ಮಾಡುವುದು (ಜಾಡು ಪತ್ತೆಮಾಡುವುದು)
ಮೊಬೈಲ್ ಫೋನ್ಗಳಂತೆಯೇ, ವೈ-ಫೈ ಸಾಧನಗಳು ಅನನ್ಯ ಗುರುತಿಸುವಿಕೆಗಳನ್ನು ಹೊಂದಿದ್ದು, ಅದನ್ನು ಟ್ರ್ಯಾಕ್ ಮಾಡುವ ಉದ್ದೇಶಗಳಿಗಾಗಿ ಬಳಸಬಹುದಾಗಿರುತ್ತದೆ ಹಾಗೂ ಇದು ಸಂಭವನೀಯ ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು. ವೈ-ಫೈ ಹಾಟ್ ಸ್ಪಾಟ್ ಅನ್ನು ಬಳಸಿ ಟ್ರ್ಯಾಕ್ ಮಾಡುವುದು ಕೂಡ ಸ್ಟಾಕಿಂಗ್ (ವ್ಯಕ್ತಿಯನ್ನು ಹಿಂಬಾಲಿಸುವುದು) ನಂತಹ ಸೈಬರ್ ಅಪರಾಧಗಳಿಗೆ ಎಡೆಮಾಡಿಕೊಡುತ್ತದೆ. ವೆಬ್ಸೈಟ್ಗಳ ಸೇವೆಯನ್ನು ಸ್ವೀಕರಿಸಲು ಅಥವಾ ಬಳಸಲು, ಬಳಕೆದಾರರು ವೆಬ್ಸೈಟ್ಗಗೆ ವೈಯಕ್ತಿಕ ಮಾಹಿತಿಯನ್ನು ಉದಾಹರಣೆಗೆ ಹೆಸರು, ವಯಸ್ಸು, ಪಿನ್ ಕೋಡ್ ಅಥವಾ ವೈಯಕ್ತಿಕ ಆದ್ಯತೆಗಳನ್ನು ಹಂಚಿಕೊಳ್ಳುವ ಅಗತ್ಯವಿರುತ್ತದೆ.
ಅಧಿಕೃತ ಅಧಿಕಾರಿಗಳಿಂದ:
ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸಮರ್ಥನೆಯ ಹೆಸರಿನೊಂದಿಗೆ, ಅಧಿಕಾರಿಗಳು ಜನರ ಬ್ರೌಸಿಂಗ್ ವಿವರಗಳಿಗೆ ಮತ್ತು ಬ್ರೌಸಿಂಗ್ ರೂಡಿಯ ಮಾಹಿತಿಗೆ ಸುಲಭ ಪ್ರವೇಶವನ್ನು ಹೊಂದಿರುತ್ತಾರೆ. ಬಳಕೆದಾರರ ಅನುಮತಿಯಿಲ್ಲದೆ ಅವರ ಮೇಲ್ವಿಚಾರಣೆ ಮಾಡಲು ನಿಮ್ಮ ಮಾಹಿತಿಯನ್ನು ಬಳಸಬಹುದಾಗಿದೆ.
ಹ್ಯಾಕರ್ಸ್ ಗಳಿಂದ:
ಅಪರಿಚಿತರ ಮಾಹಿತಿ ಕಳವು ಮತ್ತು ಬಲಿಯಾದ ಅಪರಿಚಿತ ಬ್ಯಾಂಕ್ ಖಾತೆಗಳ ಒಳನುಗ್ಗಿ ಸಾಂಸ್ಥಿಕ ಹಣಕಾಸು ಮಾಹಿತಿ ಮತ್ತು ರಹಸ್ಯಗಳನ್ನು ದುರ್ಬಳಕೆ ಮಾಡುತ್ತಾರೆ.
ವೈರ್ಲೆಸ್ ಸಂವಹನಕ್ಕಾಗಿ ರೂಟರ್ ಅನ್ನು ಸಂರಚಿಸುವಾಗ ನಿಮ್ಮನ್ನು ನೀವು ಸುರಕ್ಷಿತವಾಗಿರಿಸಲು ಅನುಸರಿಸಬೇಕಾದ ಕೆಲವು ಕ್ರಮಗಳು
- ಪ್ರವೇಶ ಬಿಂದುವಿನ ಡೀಫಾಲ್ಟ್ (ಪೂರ್ವನಿಯೋಜಿತ) ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಅನ್ನು ಬದಲಾಯಿಸಿ.ವೈಫೈ ಹೋಮ್ ನೆಟ್ವರ್ಕ್ಗಳು ಮತ್ತು ಬ್ಬ್ರಾಡ್ ಬ್ಯಾಂಡ್ ರೌಟರ್ ಗಳು ಬಳಕೆದಾರ ಹೆಸರು ಮತ್ತು ಪಾಸ್ ವಾರ್ಡ್ ಗಳೊಂದಿಗೆ ರಕ್ಷಿಸಲ್ಪಟ್ಟಿರುತ್ತವೆ ಇದರಿಂದ ಅಧಿಕೃತ ಜನರು ಮಾತ್ರ ನೆಟ್ವರ್ಕ್ನಲ್ಲಿ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಬಹುದು.
- ಡೀಫಾಲ್ಟ್ SSID (ಎಸ್ ಎಸ್ ಐ ಡಿ) ಅನ್ನು ಬದಲಿಸಿ, ಇದರಿಂದ ನಿಮ್ಮ ನೆಟ್ವರ್ಕ್ ಹೆಸರು ಪ್ರಸಾರವಾಗುವುದನ್ನು ತಪ್ಪಿಸಬಹುದಾಗಿರುತ್ತದೆ.ಪ್ರವೇಶ ಬಿಂದುಗಳು ಮತ್ತು ರೌಟರ್ ಗಳು , ಸರ್ವೀಸ್ ಸೆಟ್ ಐಡೆಂಟಿಫಯರ್ ಎಂದು ಕರೆಯಲ್ಪಡುವ ನೆಟ್ವರ್ಕ್ ಹೆಸರನ್ನು ಬಳಸುತ್ತವೆ. SSID ಅನ್ನು ತಿಳಿದುಕೊಳ್ಳುವುದರ ಮೂಲಕ ನಿಮ್ಮ ನೆಟ್ವರ್ಕ್ ಅನ್ನು ಆಕ್ರಮಣ ಮಾಡುವುದು ಸಾಧ್ಯವಿಲ್ಲ ಆದರೆ ಅದು ನೆಟ್ವರ್ಕ್ ಸರಿಯಾಗಿ ಸಂರಚನೆ (ಕಾನ್ಫಿಗರ್)ಯಾಗಿಲ್ಲ ಎಂದು ತೋರಿಸುತ್ತದೆ.
- ಬಳಕೆಯಲ್ಲಿಲ್ಲದಿದ್ದಾಗ ವೈ-ಫೈ ಅನ್ನು ಆಫ್ ಮಾಡಿನಿಮ್ಮ ಹೋಮ್ ನೆಟ್ವರ್ಕ್ ಅನ್ನು ಧೀರ್ಘಕಾಲ ಬಳಸದೆ ಇರುವಾಗ ಅದರ ದುರುಪಯೋಗವನ್ನು ತಪ್ಪಿಸಲು ವೈ-ಫೈ ಅನ್ನು ಸ್ವಿಚ್ ಆಫ್ ಮಾಡುವುದು ಉತ್ತಮವಾದ ಆಯ್ಕೆಯಾಗಿರುತ್ತದೆ. ಅಲ್ಲದೆ ಬಳಕೆಯಲ್ಲಿಲ್ಲದ ಸಮಯದಲ್ಲಿ ಪ್ರವೇಶ ಬಿಂದುವನ್ನು ಶಟ್ ಡೌನ್ (ಸ್ಥಗಿತಗೊಳಿಸಿ) ಮಾಡಿ.
- ಹೋಮ್ ವೈ-ಫೈ ಗಾಗಿ ಕ್ರಿಯಾತ್ಮಕ ಐಪಿ (dynamic IP) ವಿಳಾಸದ ಬದಲಾಗಿ ಬದಲಿಗೆ ಸ್ಥಿರ ಐಪಿ (static IP) ವಿಳಾಸಗಳನ್ನು ಬಳಸಿ.ಹೆಚ್ಚಿನ ಹೋಮ್ ನೆಟ್ವರ್ಕ್ ನಿರ್ವಾಹಕರು ತಮ್ಮ ಸಾಧನಗಳಿಗೆ ಐಪಿ ವಿಳಾಸಗಳನ್ನು ನಿಯೋಜಿಸಲು ಡೈನಾಮಿಕ್ ಹೋಸ್ಟ್ ಕಾನ್ಫಿಗರೇಶನ್ ಪ್ರೋಟೋಕಾಲ್ (ಡಿ ಹೆಚ್ ಸಿ ಪಿ) ಅನ್ನು ಬಳಸುತ್ತಾರೆ. ರೂಟರ್ ಅಥವಾ ಪ್ರವೇಶ ಬಿಂದುದಲ್ಲಿ ಡಿ ಹೆಚ್ ಸಿ ಪಿ ಅನ್ನು ಆಫ್ ಮಾಡಿ, ಅದರ ಬದಲಾಗಿ ನಿಶ್ಚಿತ ಖಾಸಗಿ ಐಪಿ ವಿಳಾಸ ಶ್ರೇಣಿಯನ್ನು ಹೊಂದಿಸಿ ನಂತರ ಪ್ರತಿ ಸಂಪರ್ಕಿತ ಸಾಧನವನ್ನು ಆ ವ್ಯಾಪ್ತಿಯೊಳಗಿನ ವಿಳಾಸದೊಂದಿಗೆ ಕಾನ್ಫಿಗರ್ ಮಾಡಿ.
- ಗೂಢಲಿಪೀಕರಣಕ್ಕಾಗಿ ಯಾವಾಗಲೂ ಪ್ರಬಲ ಪಾಸ್ವರ್ಡ್ ಅನ್ನು ಬಳಸಿಪಾಸ್ವರ್ಡ್ಗಳಲ್ಲಿ ವೈಯಕ್ತಿಕ ಮಾಹಿತಿಯನ ಬಳಕೆಯನ್ನು ತಪ್ಪಿಸಿ. ನೆನಪಿಡುವ ಸುಲಭವಾದ ನುಡಿಗಟ್ಟುಗಳು ಬಳಸಿ.
- ವೈ-ಫೈ ಸಾಧನಗಳಲ್ಲಿ ಮ್ಯಾಕ್ (MAC) ವಿಳಾಸ ಫಿಲ್ಟರಿಂಗ್ ಸಕ್ರಿಯಗೊಳಿಸಿಪ್ರವೇಶ ಬಿಂದುಗಳು ಮತ್ತು ಮಾರ್ಗನಿರ್ದೇಶಕಗಳಿಗೆ ಸಂಪರ್ಕಿಸುವ ಎಲ್ಲಾ ಸಾಧನಗಳ MAC ವಿಳಾಸಗಳನ್ನು ಟ್ರಾಕ್ ಮಾಡುತ್ತದೆ.
- ಹೆಚ್ಚುವರಿ ರಕ್ಷಣೆಗಾಗಿ ಫೈರ್ವಾಲ್ ಮತ್ತು ಆಂಟಿವೈರಸ್ ಬಳಸಿವೈರ್ಲೆಸ್ ನೆಟ್ವರ್ಕ್ ಅನ್ನು ವೈರ್ಡ್ ನೆಟ್ವರ್ಕ್ನಿಂದ ಫೈರ್ವಾಲ್ ಮತ್ತು ಆಂಟಿವೈರಸ್ ಪ್ರವೇಶದ್ವಾರದಿಂದ ಪ್ರತ್ಯೇಕ ಮಾಡಿ.
- ಸಾಧನಗಳಿಗೆ ಒದಗಿಸಲಾದ ಡೀಫಾಲ್ಟ್ ಭದ್ರತಾ ವೈಶಿಷ್ಟ್ಯಗಳನ್ನು ಬಳಸಿಎಲ್ಲಾ ವೈ-ಫೈ ಉಪಕರಣಗಳು ಕೆಲವು ರೀತಿಯ ಗೂಢಲಿಪೀಕರಣವನ್ನು ಬೆಂಬಲಿಸುತ್ತವೆ. ಆದ್ದರಿಂದ, ಅವುಗಳನ್ನು ಸಕ್ರಿಯಗೊಳಿಸಿ. ನಿಯಮಿತವಾಗಿ ಫರ್ಮ್ ವೇರ್ ಅನ್ನು ನವೀಕರಿಸಿ.
- ವೈರ್ ಲೆಸ್ (ನಿಸ್ತಂತು) ಜಾಲಗಳಲ್ಲಿ ಸೂಕ್ಷ್ಮ ಮಾಹಿತಿಗಾಗಿ ಗೂಢಲಿಪೀಕರಣ ತಂತ್ರಜ್ಞಾನವನ್ನು ಬಳಸಿ. ಗೂಢಲಿಪೀಕರಣಕ್ಕಾಗಿ ಯಾವಾಗಲೂ ಪ್ರವೇಶ ಬಿಂದುವು ಬೆಂಬಲಿಸುವ (ಮ್ಯಾಕ್ಸಿಮಮ್ ಕೀ ಸೈಜ್) ಗರಿಷ್ಟ ಕೀ ಗಾತ್ರ ವನ್ನು ಬಳಸಿ
- ಅಗತ್ಯವಿದ್ದಾಗ ಮಾತ್ರಾ ಫೈಲ್ ಹಂಚಿಕೆ ಮತ್ತು ಏರ್ಡ್ರಾಪ್ ಆಯ್ಕೆಗಳನ್ನು ಆನ್ ಮಾಡಿ.
ಇಂಟರ್ನೆಟ್ ಭದ್ರತಾ ಸಮಸ್ಯೆಗಳು ಮತ್ತು ಸಾರ್ವಜನಿಕ ವೈ-ಫೈ ಅಪಾಯಗಳು ಹೆಚ್ಚಾಗಿದೆ. ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಮಾಹಿತಿಯು ಸುರಕ್ಷಿತವಾಗಿರಿಸಲು ಸಹಾಯವಾಗುತ್ತದೆ.