ಆನ್ಲೈನ್ ​​ಶಾಪಿಂಗ್ - ಜನರು ತಮ್ಮ ಮನೆಯಿಂದಲೇ ಆರಾಮವಾಗಿ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡುವ ಅದ್ಭುತ ಆವಿಷ್ಕಾರ. ಸರಿಯಾದ ಉತ್ಪನ್ನವನ್ನು ಕಂಡುಹಿಡಿಯಲು ಹಲವು ಮಳಿಗೆಗಳಿಗೆ ತಿರುಗುವ ಗೋಜಿಲ್ಲ ಅಧಿಕ-ಉತ್ಸಾಹಭರಿತನಾದ ಮಾರಾಟಗಾರರನ್ನು ಎದುರಿಸುವ ಹಾಗಿಲ್ಲ ಚೆಕ್ಔಟ್ ಕೌಂಟರ್ ನ ಉದ್ದವಾದ ಸಾಲುಗಳಲ್ಲಿ ನಿಲ್ಲುವಹಾಗಿಲ್ಲ. ಇ-ವಾಣಿಜ್ಯ ಬೆಳವಣಿಗೆಯು ಖಂಡಿತವಾಗಿಯೂ ನಾವು ಶಾಪಿಂಗ್ ಮಾಡುವ ರೀತಿಯನ್ನು ಉತ್ತಮ ರೀತಿಯಲ್ಲಿ ಬದಲುಮಾಡಿದೆ. ಆದರೆ, ಬೇರೆ ಎಲ್ಲದರ ಹಾಗೆಯೇ, ಆನ್ಲೈನ್ ​​ಶಾಪಿಂಗ್ ಪ್ರಪಂಚವು ಗುಲಾಬಿಹೂವಿನ ಹಾಸಿಗೆಯಲ್ಲ. ಇ-ಕಾಮರ್ಸ್ ಕಂಪೆನಿಗಳು ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದರೂ, ಗ್ರಾಹಕರು ಎದುರಿಸಬೇಕಾಗಿರುವ ಕೆಲವು ಸಮಸ್ಯೆಗಳು ಇನ್ನೂ ಇವೆ.

ಸೈಬರ್ ಅಪರಾಧಿಗಳು ಹೇಗೆ  ಮಹಿಳೆಯರನ್ನು ಗುರಿಪಡಿಸಬಹುದು ಎನ್ನುವ ಕೆಲವು ವಿಧಾನಗಳನ್ನು ನೋಡೋಣ.

ಕಡಿಮೆ ವೆಚ್ಚದಲ್ಲಿ ದುಬಾರಿ ಬ್ರಾಂಡ್ ಉತ್ಪನ್ನಗಳು:

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ನಾವು ದುಬಾರಿ ಬ್ರಾಂಡ್ ಉತ್ಪನ್ನಗಳನ್ನು ನಂಬಲಾಗದ ಬೆಲೆಗಳಲ್ಲಿ ತೋರಿಸುವ ಜಾಹೀರಾತುಗಳನ್ನು ನೋಡುತ್ತೇವೆ. ಇದು ಗ್ರಾಹಕರ ಅದರಲ್ಲೂ ಬಹುಪಾಲು ಮಹಿಳೆಯರ ಗಮನವನ್ನು ಸೆಳೆಯುತ್ತದೆ ಮತ್ತು ಅದು ನೈಜವಲ್ಲದೇ ಇರುವ ಉತ್ಪನ್ನಗಳಿಗೆ ಹಣವನ್ನು ಪಾವತಿಸುವುದರ ಮೂಲಕ  ಅಂತಿಮಗೊಳ್ಳಬಹುದು. ಉದಾಹರಣೆಗೆ ಬ್ರಾಂಡೆಡ್ ಬ್ಯಾಗ್ ಗಳು, ಉಡುಪುಗಳು, ದುಬಾರಿ ಫೋನ್ ಮತ್ತು ಸೌಂದರ್ಯ ಉತ್ಪನ್ನಗಳು.

ತೂಕ ನಷ್ಟಕ್ಕೆ ನೈಸರ್ಗಿಕ ಪರಿಹಾರಗಳು:

ಹೆಚ್ಚಾಗಿ ನಮ್ಮ ಸಾಮಾಜಿಕ ನೆಟ್ವರ್ಕಿಂಗ್ ಮತ್ತು ಇನ್ಸ್ಟಂಟ್ ಸಂದೇಶ ಅಪ್ಲಿಕೇಶನ್ಗಳಲ್ಲಿ ನಾವು ತೂಕ ನಷ್ಟದ ಬಗ್ಗೆ ಸಲಹೆಗಳನ್ನು ನೀಡುವ ಸಂದೇಶಗಳನ್ನು ಪಡೆಯುತ್ತೇವೆ ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸಿದಲ್ಲಿ, ತಮ್ಮ ಉತ್ಪನ್ನವನ್ನು ಖರೀದಿಸುವಂತೆ ನಮ್ಮನ್ನು ಕೇಳುತ್ತಾರೆ. ತೂಕ ನಷ್ಟಕ್ಕೆ ಹತಾಶರಾದ ಮಹಿಳೆಯರು ಈ ಸಂದೇಶಗಳಿಗೆ ಸಿಕ್ಕಿಬೀಳುತ್ತಾರೆ. ಅವರು ನಕಲಿ ಉತ್ಪನ್ನಗಳಿಗೆ ಹಣವನ್ನು ಪಾವತಿಸುಬಿಡುತ್ತಾರೆ.

ದುಬಾರಿ ಆಭರಣಗಳು:

ಸೈಬರ್-ಅಪರಾಧಿಗಳು ಕೆಲವು ಆನ್ಲೈನ್ ​​ಆಭರಣ ವೆಬ್ಸೈಟ್ಗಳನ್ನು ವಂಚನೆಯಿಂದ ನಕಲಿಸಿ, ಮಹಿಳಾ ಗ್ರಾಹಕರನ್ನು ಗುರಿಯಾಗಿಸಿ ಆಭರಣ ಉತ್ಪನ್ನಗಳಿಗೆ ರೋಮಾಂಚಕಾರಿ ರಿಯಾಯಿತಿಗಳನ್ನು ನೀಡಬಹುದು. ಅದನ್ನು ನೋಡಿ ಮಹಿಳೆಯರು ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಖರೀದಿಸುತ್ತಾರೆ ಆದರೆ ಕಡಿಮೆ ಮೌಲ್ಯದ ಕೆಲವು ಉತ್ಪನ್ನಗಳನ್ನು ಪಡೆಯುತ್ತಾರೆ ಮತ್ತು ಅವರು ಮೋಸಕ್ಕೆ ಒಳಗಾಗಿದ್ದಾರೆಂದು ತಿಳಿದುಬಂದು ಮೂಲ ವೆಬ್ಸೈಟ್ಗೆ ದೂರು ನೀಡಿದಾಗ ಅವರು ತಮ್ಮ ವೆಬ್ಸೈಟ್ ಮೂಲಕ ಖರೀದಿ ಮಾಡಿಲ್ಲವೆಂದು ನಿರಾಕರಿಸುತ್ತಾರೆ. ಇದು ನಿಮ್ಮ ಹಣವನ್ನು ಕಳೆದುಕೊಳ್ಳಲು ಕಾರಣವಾಗಬಹುದು.

ಆನ್ಲೈನ್ ​​ಶಾಪಿಂಗ್ನಲ್ಲಿನ ಅಪಾಯಗಳು

ಬ್ರಾಂಡ್- ಇ ಕಾಮರ್ಸ್ ಸೈಟ್ ನಂಬಲಾರ್ಹವಾಗಿರುವುದೆ? ಭದ್ರತೆ- ನಿಮ್ಮ ಕ್ರೆಡಿಟ್ ಕಾರ್ಡ್ ಸುರಕ್ಷಿತವಾಗಿದೆಯೇ?ಗೌಪ್ಯತೆ- ನಿಮ್ಮ ಮಾಹಿತಿ ಮಾರಾಟವಾಗುತ್ತಿದೆಯೇ?ಶಿಪ್ಪಿಂಗ್ - ವಿನಂತಿಸಿದ ಸಮಯದಲ್ಲಿ ನೀವು ಸರಿಯಾದ ಉತ್ಪನ್ನವನ್ನು ಪಡೆಯುತ್ತಿದ್ದೀರಾ?

ಸುರಕ್ಷಿತ ಆನ್ಲೈನ್ ​​ಶಾಪಿಂಗ್ಗಾಗಿ ಸಲಹೆಗಳು

  • ಕಂಪ್ಯೂಟರ್ ಓಎಸ್ ಅನ್ನು ನವೀಕರಿಸಿರಿ:

ನಿಮ್ಮ ಪಿಸಿ ಆಂಟಿವೈರಸ್, ಆಂಟಿ ಸ್ಪೈವೇರ್, ಫೈರ್ವಾಲ್, ನವೀಕರಿಸಲಾದ ಎಲ್ಲಾ ಪ್ಯಾಚ್ಗಳು ಮತ್ತು ;ವಿಶ್ವಾಸಾರ್ಹ ಸೈಟ್ಗಳು ಮತ್ತು ಹೆಚ್ಚಿನ ಭದ್ರತಾ ಮಟ್ಟವನ್ನು ಹೊಂದಿರುವ ವೆಬ್ ಬ್ರೌಸರ್ ಭದ್ರತೆಗಳನ್ನು ನಿಮ್ಮ ಸಿಸ್ಟಮ್ ಹೊಂದಿರುವುದೇಎಂದು ಖಚಿತಪಡಿಸಿಕೊಳ್ಳಿ.

  • ವಿಶ್ವಾಸಾರ್ಹ ಸೈಟ್ಗಳ ಮೂಲಕ ಮಾತ್ರ ಶಾಪಿಂಗ್ ಮಾಡಿ:

ದಾಳಿಕೋರರು ಕಾನೂನುಬದ್ಧವಾಗಿ ಕಂಡುಬರುವ ವೆಬ್ಸೈಟ್ಗಳ ಮೂಲಕ ಬಲೆಗೆ ಬೀಲಿಸಲು ಪ್ರಯತ್ನಿಸುತ್ತಾರೆ. ಆದರೆ ಅವು ನೈಜವಾಗಿರುವುದಿಲ್ಲ. ಆದ್ದರಿಂದ, ನೀವು ವಸ್ತುಗಳನ್ನು ಖರೀದಿಸಲು ಬಯಸುವ ವೆಬ್ ಸೈಟ್ ಕುರಿತು ಸಂಶೋಧನೆ ಮಾಡಿ. ಮಾರಾಟಗಾರರ ದೂರವಾಣಿ ಸಂಖ್ಯೆಯ ದೈಹಿಕ ವಿಳಾಸವನ್ನು ಗಮನಿಸಿ ಮತ್ತು ವೆಬ್ಸೈಟ್ ವಿಶ್ವಾಸಾರ್ಹ ಸೈಟ್ ಹೌದೇ ಅಲ್ಲವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಿವಿಧ ವೆಬ್ ಸೈಟ್ಗಳನ್ನು ಹುಡುಕಿ ಮತ್ತು ಬೆಲೆಗಳನ್ನು ಹೋಲಿಸಿ ನೋಡಿ. ಆ ನಿರ್ದಿಷ್ಟ ವೆಬ್ ಸೈಟ್ ಅಥವಾ ವ್ಯಾಪಾರಿಗಳ ಬಗ್ಗೆ ಗ್ರಾಹಕರು ಮತ್ತು ಮಾಧ್ಯಮದ ವಿಮರ್ಶೆಗಳನ್ನು ಪರಿಶೀಲಿಸಿರಿ.

  • ವೆಬ್ಸೈಟಿನ ಸುರಕ್ಷತಾ ಅಂಶಗಳನ್ನು ಪರೀಕ್ಷಿಸಿ:

ಆನ್ಲೈನ್ನಲ್ಲಿ ಏನನ್ನಾದರೂ ಖರೀದಿಸಲು ನೀವು ಸಿದ್ಧರಾಗಿದ್ದಳಿ, ಬ್ರೌಸರ್ ನ ವಿಳಾಸದ ;ಬಾರ್ ಅಥವಾ ಸ್ಟೇಟಸ್ ಬಾರ್, HTTPS ಅಥವಾ ಪ್ಯಾಡ್ಲಾಕ್ನೊಂದಿಗೆ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿ ಮತ್ತು ನಂತರ ಹಣಕಾಸು ವಹಿವಾಟುಗಳನ್ನು ಮುಂದುವರಿಸಿರಿ.

  • ನಿಮ್ಮ ಡಿಜಿಟಲ್ ಪಾವತಿಗಳ ಮೇಲೆ ನಿಗಾ ಇಡಿ:

ತಕ್ಷಣ ನಿಮ್ಮ ಪಾವತಿಯನ್ನು ಮುಗಿಸಿದ ತಕ್ಷಣವೇ ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಗಳನ್ನು ಪರಿಶೀಲಿಸಿ ಮತ್ತು ನೀವು ಪಾವತಿಸಿದ ಶುಲ್ಕವೇ ನಮೂದಾಗಿದೆಯೇ ಎಂದು ತಿಳಿದುಕೊಳ್ಳಿ; ಮತ್ತು ಯಾವುದೇ ಬದಲಾವಣೆಗಳನ್ನು ನೀವು ಕಂಡುಕೊಂಡರೆ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡಿ.

  • ವೆಬ್ಸೈಟ್ಗಳಲ್ಲಿ ಕಾರ್ಡ್ ವಿವರಗಳನ್ನು ಅಥವಾ ಬ್ಯಾಂಕ್ ವಿವರಗಳನ್ನು ಉಳಿಸಬೇಡಿ:

ಶಾಪಿಂಗ್ ವೆಬ್ಸೈಟ್ಗಳಲ್ಲಿ ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಸಂಗ್ರಹಿಸಿಡಬೇಡಿ. ನಿಮ್ಮ ಆನ್ಲೈನ್ ಶಾಪಿಂಗ್ ಅನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ವೆಬ್ ಬ್ರೌಸರ್ ಕುಕೀಗಳನ್ನು ತೆರವುಗೊಳಿಸಿ, ನಿಮ್ಮ ಪಿಸಿ ಅನ್ನು ಆಫ್ ಮಾಡಿ. ;ಸ್ಪ್ಯಾಮರ್ಗಳು ಮತ್ತು ಫಿಶರ್ಗಳು ಇಂಟರ್ನೆಟ್ಗೆ ಸಂಪರ್ಕಗೊಂಡಿರುವ ಸಿಸ್ಟಮ್ಗಾಗಿ ಹುಡುಕುತ್ತಿರುತ್ತಾರೆ ಮತ್ತು ಸ್ಪ್ಯಾಮ್ ಇಮೇಲ್ಗಳನ್ನು ಕಳುಹಿಸಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದಾದ ದೋಷಪೂರಿತ ಸಾಫ್ಟ್ವೇರ್ ಅನ್ನು ಸ್ಥಾಪಿಸಲು ಪ್ರಯತ್ನಿಸಿತ್ತಾರೆ.

  • ನಿಮ್ಮ ಖರೀದಿಗಳ ಬಗ್ಗೆ ಕೇಳುವ ಇಮೇಲ್ಗೆ ಎಂದಿಗೂ ಪ್ರತಿಕ್ರಿಯೆ ನೀಡಬೇಡಿ:

" ಉತ್ಪನ್ನಕ್ಕಾಗಿ ದಯವಿಟ್ಟು ನಿಮ್ಮ ಪಾವತಿ, ಖರೀದಿ ಮತ್ತು ಖಾತೆಯ ವಿವರಗಳನ್ನು ದೃಢೀಕರಿಸಿ." ಯಂತಹ ಇಮೇಲ್ಗಳ ಬಗ್ಗೆ ಎಚ್ಚರಿಕೆಯಿಂದಿರಿ. ನ್ಯಾಯಸಮ್ಮತ ವ್ಯಾಪಾರಿ ಜನರು ಎಂದಿಗೂ ಅಂತಹ ಇಮೇಲ್ಗಳನ್ನು ಕಳುಹಿಸುವುದಿಲ್ಲ. ನೀವು ಅಂತಹ ಇಮೇಲ್ಗಳನ್ನು ಸ್ವೀಕರಿಸಿದರೆ ವ್ಯಾಪಾರಿಗೆ ತಕ್ಷಣವೇ ಕಾಲ್ ಮಾಡಿ ಮತ್ತು ಈ ಮಾಹಿತಿಯನ್ನು ತಿಳಿಸಿ.

  • ಆಗಾಗ್ಗೆ ಪಾಸ್ವರ್ಡ್ಗಳನ್ನು ಬದಲಾಯಿಸಿ:

ದೀರ್ಘಕಾಲ ಒಂದೇ ಪಾಸ್ವರ್ಡ್ ಅನ್ನು ಬಳಸಬೇಡಿ, ನಿಮ್ಮ ಇಮೇಲ್ ಐಡಿ, ಬ್ಯಾಂಕ್ ಖಾತೆ, ಕ್ರೆಡಿಟ್-ಡೆಬಿಟ್ ಕಾರ್ಡ್ ಪಾಸ್ವರ್ಡ್ಗಳನ್ನು ಆಗಾಗ್ಗೆ ಬದಲಿಸಿ.

  • ವಿವಿಧ ವೆಬ್ಸೈಟ್ಗಳಿಗೆ ಬೇರೆ ಬೇರೆ ಪಾಸ್ವರ್ಡ್ಗಳು:

ನೀವೇನಾದರೂ ಎಲ್ಲಾ ವೆಬ್ ಸೈಟ್ ಗಳಿಗೂ ಒಂದೇ ರೀತಿಯ ಅಥವಾ ಒಂದೇ ಒಂದನ್ನು ಹೋಲುವ  ಪಾಸ್ವರ್ಡ್ ಅನ್ನು ಬಳಸುತ್ತಿದ್ದು, ಹ್ಯಾಕರ್ಗಳು ನಿಮ್ಮ ಪಾಸ್ವರ್ಡ್ ಅನ್ನು ಕ್ರ್ಯಾಕ್  ಮಾಡಿದರೆ ಅವರು ನೀವು ಬಳಸುವ ಎಲ್ಲವನ್ನು ಕ್ರ್ಯಾಕ್ ಮಾಡಿಬಿಡಬಹುದು. ಆದ್ದರಿಂದ ಎಲ್ಲಾ ವೆಬ್ಸೈಟ್ಗಳಿಗೂ ವಿಭಿನ್ನವಾದ ಪಾಸ್ವರ್ಡ್ ಬಳಸಿ. ಆದಾಗ್ಯೂ ಎಲ್ಲಾ ಪಾಸ್ವರ್ಡ್ಗಳನ್ನು ನೆನಪಿಟ್ಟುಕೊಳ್ಳಲು ಕಷ್ಟವಾಗುವುದಾದರೂ, ಅದು ಹೆಚ್ಚಿನ ಸುರಕ್ಷತಾ ಪದರವನ್ನು ಒದಗಿಸುತ್ತದೆ.

  • ಸುರಕ್ಷಿತ ನೆಟ್ವರ್ಕ್ಗಳನ್ನು ಬಳಸಿ:

ಸುರಕ್ಷಿತ ಇಂಟರ್ನೆಟ್ ಸಂಪರ್ಕವನ್ನು ಯಾವಾಗಲೂ ಬಳಸಿ. ಸಾರ್ವಜನಿಕ Wi-Fi ತಾಣಗಳು ಸೈಬರ್ ದಾಳಿಗೆ ಒಳಗಾಗುತ್ತವೆ.

  • ರಿಯಾಯಿತಿಗಳು / ಬಹುಮಾನಗಳನ್ನು ನೀಡುವ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ:

ಸೈಬರ್ ಅಪರಾಧಿಗಳು ಜನಪ್ರಿಯ ಇ ಕಾಮರ್ಸ್ ವೆಬ್ಸೈಟ್ಗಳಲ್ಲಿ ಉತ್ತಮ ರಿಯಾಯಿತಿಯನ್ನು ಹೊಂದಿರುವ ಸಂದೇಶಗಳನ್ನು ಕಳುಹಿಸುತ್ತಾರೆ. WhatsApp ಗುಂಪುಗಳಲ್ಲಿ ಅಥವಾ ಅಜ್ಞಾತ ಸಂಖ್ಯೆಗಳಿಂದ ಪಡೆದ ಲಿಂಕ್ಗಳ ಮೇಲೆ ಕ್ಲಿಕ್ ಮಾಡುವುದಕ್ಕಿಂತ, ಕೊಡುಗೆಗಳಿಗಾಗಿ ಮೂಲ ವೆಬ್ಸೈಟ್ನಲ್ಲಿ ಪರಿಶೀಲಿಸುವುದು ಸದಾ ಉತ್ತಮ.

Page Rating (Votes : 0)
Your rating: