ವಾಟ್ಸ್ಆಪ್ ಒಂದು ಉತ್ತಮವಾದ ಸಂವಹನ ಸಾಧನವಾಗಿದೆ. ಸಾಮಾನ್ಯ ಜನರಲ್ಲಿ ವಾಟ್ಸ್ಆಪ್ ಜನಪ್ರಿಯತೆಗೆ ಪ್ರಮುಖ ಕಾರಣವೆಂದರೆ ಮುಖ್ಯವಾಗಿ ಬಳಕೆಗೆ ಸುಲಭ ಮತ್ತು ಕಡಿಮೆ ಸಂಪರ್ಕದಲ್ಲಿ ಸಹ ಬಳಕೆ ಮಾಡುವುದಾಗಿದೆ. ಪ್ರಸ್ತುತ ಭಾರತದಲ್ಲಿನ ವಾಟ್ಸ್ಆಪ್ ಬಳಕೆದಾರದ ಸಂಖ್ಯೆ ಅಗ್ರಸ್ಥಾನದಲ್ಲಿದ್ದು, ವಿಶ್ವದಾದ್ಯಂತದ ಬಹುಪಾಲು ಜನರ ಸಂವಹನ ಸಾಧನವಾಗಿ ವಿಕಸನಗೊಂಡಿದೆ ಹಾಗೂ ಅದರ ಬೆಳವಣಿಗೆಯು ನಿರಂತರವಾಗಿದೆ. ನೀವು ಯಾರಿಗಾದರೂ ಸಂದೇಶವನ್ನು ಕಳಿಸಲು ಹುಡುಕುತ್ತಿದ್ದೀರಾ ಅಥವಾ ನಿಮ್ಮ ರಜೆಯ ಚಿತ್ರಗಳನ್ನು ಸ್ನೇಹಿತರ ಗುಂಪಿಗೆ ಕಳುಹಿಸಲು ಬಯಸುತ್ತಿದ್ದರೆ, ನೀವು ವಾಟ್ಸ್ಆಪ್ ಅನ್ನು ಬಳಸುವ ಸಾಧ್ಯತೆ ಅತ್ಯಧಿಕವಾಗಿದೆ.
ಸೈಬರ್ ಅಪರಾಧಗಳಲ್ಲಿ ಮಹಿಳೆಯರ ಪ್ರಧಾನ ಗುರಿ ಎಂದು ಎಂದು ಗಮನಿಸಲಾಗಿದೆ; ವಾಟ್ಸ್ಆಪ್ ಸಾಕಷ್ಟು ಜನಗಳು ಬಳಸುವ ಸಂವಹನ ಸಾಧನವಾಗಿದ್ದು, ವಂಚಕರು ತಮ್ಮ ಗುರಿಯನ್ನು ಬಲೆಗೆ ಹಾಕಲು ಹೊಸ ವಿಧಾನಗಳನ್ನು ಮಾಡುತ್ತಾರೆ. ವಾಟ್ಸ್ಆಪ್ ನ ಸುರಕ್ಷಿತ ಬಳಕೆಗಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ರಕ್ಷಿಸಲು ಮತ್ತು ಸೈಬರ್ ಅಪರಾಧಗಳಿಗೆ ಬಲಿಪಶುವಾಗದಿರಲು ಕೆಲವು ಭದ್ರತಾ ಕ್ರಮಗಳನ್ನು ಅನುಸರಿಸಿ.
-
ವಾಟ್ಸ್ಆಪ್ ಫೋಟೋಗಳನ್ನು ಕ್ಯಾಮೆರಾ ರೋಲ್ಗೆ ನೇರವಾಗಿ ಸೇವ್ ಆಗದಂತೆ ಆಯ್ಕೆ ಮಾಡಿ.
ವಾಟ್ಸ್ಆಪ್ ಒಂದು ಸಂದೇಶ ಸಂವಹನದ ಅಪ್ಲಿಕೇಶನ್ ಆಗಿರುವುದರಿಂದ, ಕೆಲವೊಮ್ಮೆ ವಯುಕ್ತಿಕ ಸಂದೇಶಗಳೂ ಹರಿದಾಡಬಹುದು. ನೀವು ಚಿತ್ರಗಳನ್ನು ಶೇರ್ ಮಾಡಿದಾಗ ಅದು ಕ್ಯಾಮೆರಾ ರೋಲ್ಗೆ ಸ್ವಯಂ ಸೇವ್ ಆಗಬಹುದು. ಹಾಗೆ ಮಾಡುವುದರಿಂದ ನಿಮ್ಮ ಸ್ನೇಹಿತರು ಯಾವಾಗಲಾದರೂ ನಿಮ್ಮ ಫೋಟೊಗಳನ್ನು ನೋಡುತ್ತಿದ್ದಾಗ ನಿಮ್ಮ ವೈಯಕ್ತಿಕ ಫೋಟೋಗಳು ಪಾಪ್ ಅಪ್ ಆಗಬಹುದು.
- ಐಫೋನ್ ಬಳಕೆದಾರರು: ನಿಮ್ಮ ಫೋನ್ನ ಸೆಟ್ಟಿಂಗ್ಗಳ ಮೆನುವಿನಲ್ಲಿ, 'ಪ್ರೈವಸಿ (ಗೌಪ್ಯತೆ)', 'ಫೋಟೋಸ್ (ಫೋಟೋಗಳು)' ಮತ್ತು ಕ್ಯಾಮೆರಾ ರೋಲ್ಗೆ ಚಿತ್ರಗಳನ್ನು ನೀಡುತ್ತಿರುವ ಅಪ್ಲಿಕೇಶನ್ಗಳ ಪಟ್ಟಿಯಿಂದ ಅದನ್ನು ಡಿ-ಸೆಲೆಕ್ಟ್ (ಆಯ್ಕೆ ಮಾಡಬೇಡಿ) ಕ್ಲಿಕ್ ಮಾಡಿ.
- ಆಂಡ್ರಾಯ್ಡ್ ಬಳಕೆದಾರರು: ಫೈಲ್ ಎಕ್ಸ್ಪ್ಲೋರರ್ ಅಪ್ಲಿಕೇಶನ್ ಆದ ಇ ಎಸ್ ಫೈಲ್ ಎಕ್ಸ್ ಪ್ಲೋರರ್ ಅನ್ನು ಬಳಸಿ, ವಾಟ್ಸ್ ಆಪ್ ನ 'ಚಿತ್ರಗಳು' ಮತ್ತು 'ವೀಡಿಯೋಗಳು' ಫೋಲ್ಡರ್ ಗಳನ್ನು ಹುಡುಕಿ. ಪ್ರತಿಯೊಂದರೊಳಗೆ '.Nomedia' ಎಂದು ಫೈಲ್ ಅನ್ನು ರಚಿಸಿ. ಆಂಡ್ರಾಯ್ಡ್ ಗ್ಯಾಲರಿಯು ಫೋಲ್ಡರ್ ಸ್ಕ್ಯಾನಿಂಗ್ ಮಾಡುವುದನ್ನು ನಿಲ್ಲಿಸುತ್ತದೆ.
-
ಅಪ್ಲಿಕೇಶನ್ ಲಾಕ್ನೊಂದಿಗೆ ನಿಮ್ಮ ಸಂದೇಶ ಕಳುಹಿಸುವಿಕೆಯ ಮತ್ತು ಇತರ ಪ್ರಮುಖ ಅಪ್ಲಿಕೇಶನ್ಗಳನ್ನು ಲಾಕ್ ಮಾಡಿ
ಪಾಸ್ವರ್ಡ್ ಅಥವಾ ಪಿನ್ ಬಳಸುವ ಮೂಲಕ ವಾಟ್ಸಾಪ್ ಅನ್ನು ರಕ್ಷಿಸಲು ಉತ್ತಮ ಮಾರ್ಗವಾಗಿದೆ. ಸ್ವತಃ ವಾಟ್ಸಾಪ್ ಇಂತಹ ವೈಶಿಷ್ಟ್ಯವನ್ನು ಒದಗಿಸುವುದಿಲ್ಲ. ನಿಮ್ಮ ಅಪ್ಲಿಕೇಶನ್ಗಳನ್ನು ಲಾಕ್ ಮಾಡಲು ಬಳಸಬಹುದಾದ (ಥರ್ಡ್ ಪಾರ್ಟಿ ) ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳು ಇವೆ. ನಿಮಗೆ ಅಗತ್ಯವಿಲ್ಲ ಎಂದು ನಿಮಗೆ ಅನಿಸಬಹುದು ಆದರೆ ನಿಮ್ಮ ಫೋನ್ ಕಳೆದುಕೊಂಡರೆ, ಅದು ನಿಮ್ಮ ಚಾಟ್ಗಳ ಪ್ರವೇಶವನ್ನು ನಿರ್ಬಂಧಿಸುತ್ತದೆ. ಹಾಗೆಯೇ ನೀವು ಉತ್ತಮ ವಿಮರ್ಶೆಯನ್ನು ಪಡೆದಿರುವ ಅಪ್ಲಿಕೇಶನ್ಗಳನ್ನು ಬಳಸಿರಿ ಮತ್ತು ವಿಶ್ವಾಸಾರ್ಹ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳುವುದನ್ನು ಎಂದು ಖಚಿತಪಡಿಸಿಕೊಳ್ಳಿ.
-
'ಕೊನೆಯ ವೀಕ್ಷಣೆ' ಟೈಮ್ ಸ್ಟಾಂಪ್ ಅನ್ನು ಮರೆಮಾಚಿರಿ.
ಟೈಮ್ ಸ್ಟಾಂಪ್ ಎಷ್ಟು ಮುಖ್ಯವಾದ ಮಾಹಿತಿಯಲ್ಲ ಎಂದು ನಾವು ಭಾವಿಸಿರಬಹುದು. ಆದರೆ ಒಬ್ಬ ಸ್ಕ್ಯಾಮರ್ ಗೆ ಈಗಾಗಲೇ ನಿಮ್ಮ ಬಗ್ಗೆ ಹಲವು ವಿಷಯಗಳನ್ನು ತಿಳಿದಿದ್ದರೆ, ಈ ಕೊನೆಯ ತುಂಡು ಉಳಿದ ಸಂಬಂಧಿತ ಮಾಹಿತಿಯನ್ನು ಸೇರಿಸುವುದರಲ್ಲಿ ಅವನಿಗೆ ಉಪಯುಕ್ತವಾಗಬಹುದು - ನೀವು ಎಚ್ಚರವಾಗಿದ್ದರೂ ಇಲ್ಲವೋ; ಮನೆಯಲ್ಲಿರುವಿರೋ ಅಥವಾ ಹೊರದೇಶದಲ್ಲಿ; ಸಿನಿಮಾದಿಂದ ಹೊರಬರುವುದು ಅಥವಾ ವಿಮಾನದಿಂದ ಹೊರಬರುವುದು. ವಾಟ್ಸ್ಆಪ್ ನ 'ಪ್ರೊಫೈಲ್' ನಲ್ಲಿ ನಿಮ್ಮ 'ಕೊನೆಯ ವೀಕ್ಷಣೆ (ಲಾಟ್ ಸೀನ್)' ಸಮಯವನ್ನು ಯಾರು ನೋಡುತ್ತಾರೆ ಎಂಬುದನ್ನು ನೀವು ನಿಷ್ಕ್ರಿಯಗೊಳಿಸಬಹುದು ಅಥವಾ ನಿರ್ಬಂಧಿಸಬಹುದು; ಆಂಡ್ರಾಯ್ಡ್ , ಐ ಓ ಎಸ್, ವಿಂಡೋಸ್ ಅಥವಾ ಬ್ಲಾಕ್ ಬೆರಿ ಯಲ್ಲಿ 'ಗೌಪ್ಯತೆ' ಮೆನುಗೆ ಹೋಗಿ. ನೀವು ಅದನ್ನು ಆಫ್ ಮಾಡಿದರೆ, ನೀವು ಸಹ ಇತರ ಬಳಕೆದಾರರ 'ಕೊನೆಯ ವೀಕ್ಷಣೆ' ಸಮಯಗಳನ್ನು ನೋಡಲು ಸಾಧ್ಯವಾಗುವುದಿಲ್ಲ.
-
ಪ್ರೊಫೈಲ್ ಚಿತ್ರಕ್ಕೆ ಪ್ರವೇಶವನ್ನು ನಿರ್ಬಂಧಿಸಿ
ನಿಮ್ಮ ಮೊಬೈಲ್ ಸಂಖ್ಯೆಯ ನಂತರ ನಿಮ್ಮ ಪ್ರೊಫೈಲ್ ಚಿತ್ರವು ವಾಟ್ಸ್ಆಪ್ ಅಥವಾ ಇತರ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ಗಳನ್ನು ಬಳಸುವಾಗ ರಕ್ಷಿಸಬೇಕಾದ ಅತ್ಯಂತ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿ. ಎಲ್ಲರಿಗೂ ಪ್ರೊಫೈಲ್ ಚಿತ್ರವನ್ನು ನೋಡುವುದನ್ನು ಮಿತಿಗೊಳಿಸಲು ವಾಟ್ಸ್ಆಪ್ ಭದ್ರತಾ ವೈಶಿಷ್ಟ್ಯವನ್ನು ಒದಗಿಸಿದೆ. ಪೂರ್ವನಿಯೋಜಿತವಾಗಿ ಪ್ರೊಫೈಲ್ ಚಿತ್ರವನ್ನು ಪ್ರತಿಯೊಬ್ಬರಿಂದ ನೋಡಬಹುದಾಗಿದೆ. ಆದರೆ ನೀವು 'ಸಂಪರ್ಕಗಳಿಗೆ ಮಾತ್ರ' ಎಂಬ ಸೆಟ್ಟಿಂಗ್ಗಳನ್ನು ಕಸ್ಟಮೈಸ್ ಮಾಡಿದರೆ ಅದು ನಿಮ್ಮ ವೈಯಕ್ತಿಕ ಡೇಟಾಗೆ ವೀಕ್ಷಣಾ ಪ್ರವೇಶವನ್ನು ದೊಡ್ಡ ಪ್ರಮಾಣದಲ್ಲಿ ಮಿತಿಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ನಿಮ್ಮ ಸಂಪರ್ಕಗಳಲ್ಲಿ ಅನಗತ್ಯ ಸಂಖ್ಯೆಗಳನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಗೌಪ್ಯತೆ ಮೆನುವಿನಲ್ಲಿ ಪ್ರೊಫೈಲ್ ಚಿತ್ರ ಹಂಚಿಕೆಯನ್ನು "ಸಂಪರ್ಕಗಳು ಮಾತ್ರ" ಗೆ ಸೆಟ್ ಮಾಡಿಸಿ
-
ಸ್ಕ್ಯಾಮ್ಗಳಿಗೆ ಕಣ್ಗಾವಲಿಡಿ.
ವಾಟ್ಸ್ಆಪ್ ಸ್ವತಃ ಅಪ್ಲಿಕೇಶನ್ ಮೂಲಕ ನಿಮ್ಮನ್ನು ಎಂದೂ ಸಂಪರ್ಕಿಸುವುದಿಲ್ಲ. ನೀವು ಅವರ ಸಹಾಯ ಮತ್ತು ಬೆಂಬಲವನ್ನು ಕೇಳದ ಹೊರತು ವಾಟ್ಸ್ಆಪ್ ಸ್ವತಃ ಚಾಟ್ಗಳು, ಧ್ವನಿ ಸಂದೇಶಗಳು, ಪಾವತಿ, ಬದಲಾವಣೆಗಳು, ಫೋಟೋಗಳು ಅಥವಾ ವೀಡಿಯೊಗಳ ಬಗ್ಗೆ ಇಮೇಲ್ಗಳನ್ನು ಕಳುಹಿಸುವುದಿಲ್ಲ. ಉಚಿತ ಚಂದಾದಾರಿಕೆ ನೀಡುತ್ತಿರುವ ಯಾರಾದರೂ, ವಾಟ್ಸ್ಆಪ್ ನಿಂದ ಎಂದು ಹೇಳಿಕೊಳ್ಳುವುದು ಅಥವಾ ನಿಮ್ಮ ಖಾತೆಯನ್ನು ಕಾಪಾಡಿಕೊಳ್ಳಲು ಲಿಂಕ್ಗಳನ್ನು ಅನುಸರಿಸಲು ಪ್ರೋತ್ಸಾಹಿಸುವುದು ಖಂಡಿತವಾಗಿಯೂ ಹಗರಣವಾಗಿರುತ್ತದೆ ಮತ್ತು ಅದು ವಿಶ್ವಾಸಕ್ಕೆ ಅನರ್ಹ.
-
ವಾಟ್ಸ್ಆಪ್ ಅನ್ನು ಕಸ್ಟಮೈಸ್ ಮಾಡಲು ತೃತೀಯ ಅಪ್ಲಿಕೇಶನ್ಗಳ ಬಳಕೆಯನ್ನು ಮಾಡಬೇಡಿ.
ನಮಲ್ಲಿ ಅನೇಕ ಬಳಕೆದಾರರು ವಾಟ್ಸ್ಆಪ್ ಥೀಮ್ಗಳು, ಐಕನ್ಗಳು ಮತ್ತು ಫಾಂಟ್ಗಳನ್ನು ಕಸ್ಟಮೈಸ್ ಮಾಡಲು ಇಷ್ಟಪಡುತ್ತೇವೆ. ಇದಕ್ಕಾಗಿ ಮೂರನೇ ಪಕ್ಷದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಈ ಮೂರನೇ ವ್ಯಕ್ತಿ ಅಪ್ಲಿಕೇಶನ್ಗಳು ವಾಟ್ಸ್ಆಪ್ ಗೆ ಒಂದು ಹೊಸರೂಪ ನೀಡುತ್ತದೆ. ಬಹಳಷ್ಟು ಬಳಕೆದಾರರು ತೃತೀಯ ಕೀಬೋರ್ಡ್ ಅಪ್ಲಿಕೇಶನ್ಗಳನ್ನು ಬಳಸುತ್ತಾರೆ. ಇದು ಸುರಕ್ಷತೆ ಅಪಾಯಗಳಿಗೆ ಕಾರಣವಾಗಬಹುದು ಅವರು ಗೌಪ್ಯತೆ ಮತ್ತು ಭದ್ರತೆಯನ್ನು ರಾಜಿಮಾಡಿಕೊಳ್ಳಲು ಕಾರಣವಾಗಬಹುದು. ಈ ಅಪ್ಲಿಕೇಶನ್ಗಳು ಕೆಲವು ವಾಟ್ಸ್ಆಪ್ ನ ಸೆಟ್ಟಿಂಗ್ಗಳನ್ನು ಬದಲಾಯಿಸಬಹುದು ಅಥವಾ ಮಾರ್ಪಡಿಸಬಹುದು. ನೀವು ಯೋಚಿಸಬೇಕಾಗಿರುವುದು ಪೂರ್ವನಿಯೋಜಿತವಾಗಿ ವಾಟ್ಸ್ಆಪ್ ನಿಮ್ಮ ಸಂದೇಶಗಳನ್ನು ರಕ್ಷಿಸಲು ಮೊದಲಿಂದ ಅಂತ್ಯದವರೆಗೆ ಗೂಢಲಿಪೀಕರಣವನ್ನು ಬಳಸುತ್ತದೆ ಮತ್ತು ಯಾದರ ಮಧ್ಯದಲ್ಲಿ ಯಾರೂ ಅದನ್ನು ಓದಲಾಗುವುದಿಲ್ಲ. ಅದೇ ರೀತಿಯಾಗಿ ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ಫೋನ್ ಸುರಕ್ಷಿತವಾಗಿರಬೇಕು. ಮೂರನೇ ಪಕ್ಷದ ಅನ್ವಯಿಕೆಗಳನ್ನು ಅಧಿಕೃತ ಅಪ್ಲಿಕೇಶನ್ ಸ್ಟೋರ್ಗಳಲ್ಲಿ ಅಪ್ಲೋಡ್ ಮಾಡಲಾಗುವುದಿಲ್ಲ, ಅವುಗಳ ಮೇಲೆ ಮಾಲ್ವೇರ್ ವಿಶ್ಲೇಷಣೆ ಇರುವುದಿಲ್ಲ. ಆದ್ದರಿಂದ ಈ ಅಪ್ಲಿಕೇಶನ್ಗಳ ಬಳಕೆಯು ನಿಮ್ಮ ಗೌಪ್ಯತೆ ಮತ್ತು ಭದ್ರತೆಯನ್ನು ಅಪಾಯದಲ್ಲಿರಿಸಿಕೊಳ್ಳಬಹುದು.
-
ವಾಟ್ಸ್ಆಪ್ ವೆಬ್ನಿಂದ ಲಾಗ್ ಔಟ್ ಮಾಡುವುದನ್ನು ನೆನಪಿಡಿ
ವಾಟ್ಸ್ಆಪ್ ಇತ್ತೀಚೆಗೆ ವಾಟ್ಸ್ಆಪ್ ವೆಬ್ ಬಿಡುಗಡೆ ಮಾಡಿದೆ. ವೈಯಕ್ತಿಕ ಕಂಪ್ಯೂಟರ್ನಲ್ಲಿ ಕೆಲಸ ಮಾಡುವಾಗ ವಾಟ್ಸ್ಆಪ್ ನ ಈ ರೀತಿಯ ಪ್ರತಿಬಿಂಬಿಸುವ ಸೇವೆಯು ಜೀವನವನ್ನು ಸುಲಭಗೊಳಿಸುತ್ತದೆ. ಆದಾಗ್ಯೂ, ಹೆಚ್ಚಿನ ಬಳಕೆದಾರರು ಅವರು ತಮ್ಮ ಮೊಬೈಲ್ ಅಥವಾ ಗೂಗಲ್ ಕ್ರೋಮ್ ಬ್ರೌಸರ್ನಲ್ಲಿನ ವಾಟ್ಸ್ಆಪ್ ವೆಬ್ನಿಂದ ಲಾಗ್ ಔಟ್ ಮಾಡಬೇಕೆಂಬ ಅರಿವಿರುವುದಿಲ್ಲ. ನೀವು ಕಾಫಿ ಬ್ರೇಕ್ಗಾಗಿ ಹೊರಬಂದಾಗ ನಿಮ್ಮ ಸಹೋದ್ಯೋಗಿಗಳು ನಿಮ್ಮ ಚಾಟ್ಗಳನ್ನು ದೊಡ್ಡ ಪರದೆಯಲ್ಲಿ ಓದುತ್ತಾರೆ ಎಂಬುದನ್ನು ಊಹಿಸಿ ನೋಡಿ.