ಭಾರತ, ಇದರ ಪ್ರಮುಖ ಜನಸಂಖ್ಯೆ ಸಾಮಾಜಿಕ ಮಾಧ್ಯಮಕ್ಕೆ ಸದಾ ಅಂಟುಕೊಂಡಿದ್ದು, ಅದರಲ್ಲೂ ದಿನನಿತ್ಯದ ಅವಶ್ಯಕತೆಗಳಿಗಾಗಿ ಇಂಟರ್ನೆಟ್ ಅನ್ನು ಬಳಸುವ ಮಹಿಳೆಯರ ಸಂಖ್ಯೆಯು ಭರದಿಂದ ಏರುತ್ತಿದೆ. ಸಂಪರ್ಕಿತ ಸಮುದಾಯದ ಒಂದು ಭಾಗವಾಗಿರುವ ಬಹಳಷ್ಟು ಆನ್ಲೈನ್ ಮಹಿಳೆಯರು, ಆನ್ಲೈನ್ ವ್ಯವಹಾರಗಳು, ಸಾಮಾಜಿಕ ಮಾಧ್ಯಮ, ಪ್ರಯಾಣ ಸಹಾಯ, ಸಂದೇಶ ಕಳುಹಿಸುವಿಕೆ, ಇಮೇಲ್, ಅಡುಗೆ ವೀಡಿಯೊಗಳು, ಉದ್ಯೋಗ ಹುಡುಕಾಟ, ಯೋಗ ವೀಡಿಯೋಗಳು, ಹೊಸ ತಾಯಂದಿರಿಗೆ ಪಾಲನೆಯ ಸಲಹೆ, ಹೊಸ ವ್ಯವಹಾರವನ್ನು ಪ್ರಾರಂಭಿಸುವ ಉದ್ಯಮಶೀಲ ಸಹಾಯ ಇತ್ಯಾದಿ., ಗಾಗಿ ಇಂಟರ್ನೆಟ್ ಅನ್ನು ಅವಲಂಬಿಸಿದ್ದಾರೆ. ಹೆಚ್ಚಿನ ಮಹಿಳೆಯರು ತಮ್ಮ ಲಭ್ಯವಿರುವ ಉಚಿತ ಸಮಯದಲ್ಲಿ ಅಂತರ್ಜಾಲವನ್ನು ಬಳಸಲು ಬಯಸುತ್ತಾರೆ. ಸಾಮಾನ್ಯವಾಗಿ, ಮಹಿಳೆಯ ಸ್ವಭಾವವು ಬಹಳ ಒಳ್ಳೆಯದು. ಅವರು ಕಾಳಜಿಯನ್ನು ಹೊಂದಿರುತ್ತಾರೆ, ಹಾಗೂ ಮುಗ್ಧ, ಸಮರ್ಪಿತ, ಪ್ರಾಮಾಣಿಕ ಮತ್ತು ನೈಜವಲ್ಲದ್ದನ್ನು ಹಿಂದೂ ಮುಂದೂ ನೋಡದೆ ನಂಬುತ್ತಾರೆ. ಸೈಬರ್ ಅಪರಾಧಿಗಳು ಮಹಿಳಾ ದುರ್ಬಲ ಪ್ರಕೃತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ ಮತ್ತು ಈ ರೀತಿಯಾಗಿ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳಲ್ಲಿ ಬಹಳಷ್ಟು ಹೆಚ್ಚಳ ಉಂಟಾಗಿದೆ.

ಇಂಟರ್ನೆಟ್ ಈ ಡಿಜಿಟಲ್ ಜಗತ್ತಿನಲ್ಲಿ ನಮ್ಮ ಜೀವನವನ್ನು ಹೆಚ್ಚು ಅನುಕೂಲಕರವಾಗಿ ಮಾಡಿದೆ, ಆದರೆ ಇದು ಋಣಾತ್ಮಕ ಪರಿಣಾಮಗಳನ್ನು ಕೂಡಾ ಹೊಂದಿದೆ. ತಮ್ಮ ಸ್ವಾರ್ಥ ಉದ್ದೇಶಗಳಿಗಾಗಿ ಅಂತರ್ಜಾಲವನ್ನು ಬಳಸಿಕೊಳ್ಳಲು ಬಯಸುವವರಿಗೆ ವಿವಿಧ ಅವಕಾಶಗಳನ್ನು ಇಂಟರ್ನೆಟ್ ಒದಗಿಸುತ್ತದೆ. ಇದರ ಫಲಿತಾಂಶವೇ ಮಾಲ್ವೇರ್, ಫಿಶಿಂಗ್, ಫಾರ್ಮಿಂಗ್, ಐಡೆಂಟಿಟಿ ಥೆಫ್ಟ್, ಸ್ಪೂಫಿಂಗ್, ಆನ್ಲೈನ್ ಸ್ಕ್ಯಾಮ್ಗಳು, ವೈರಸ್, ಟ್ರೋಜನ್, ರಾನ್ಸಮ್ವೇರ್ ಮತ್ತು ಇನ್ನಿತರ ಹಲವು ಬೆದರಿಕೆಗಳು. ಈ ಸೈಬರ್ ಜಗತ್ತಿನಲ್ಲಿ ಮಹಿಳೆಯರೇ ಹೇಗೆ ಸುರಕ್ಷಿತರಾಗಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ನಮ್ಮ ಮನಸ್ಸನ್ನು ಕಾಡುತ್ತದೆ. ಈ ಡಿಜಿಟಲೈಸ್ಡ್ ಪ್ರಪಂಚದಲ್ಲಿ, ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ಬೆದರಿಲ್ಪಡುತ್ತಿದ್ದಾರೆ, ಹಿಂಬಾಲಿಸಲ್ಪಡುತ್ತಿದ್ದಾರೆ ಈ ರೀತಿಯಾಗಿ ದಿನನಿತ್ಯ ಮಹಿಳೆಯರ ಮೇಲೆ ಉಲ್ಲಂಘನೆಗಳಾಗುತ್ತಿದೆ. ಆದರೆ ಚಿಂತೆಯ ಅಗತ್ಯವಿಲ್ಲ; ತಮ್ಮನ್ನು ಸುರಕ್ಷಿತವಾಗಿರಿಸಲು ಸಣ್ಣ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ, ಈ ಸೈಬರ್ ಜಗತ್ತಿನಲ್ಲಿ ಅವರು ತುಂಬಾ ಸುರಕ್ಷಿತವಾಗಿರಬಹುದಾಗಿದೆ.

ಭಾರತ ಸರ್ಕಾರವು ಮಾಹಿತಿ ಭದ್ರತಾ ಶಿಕ್ಷಣ ಮತ್ತು ಜಾಗೃತಿ (ಐಎಸ್ಇಎ) ಫೇಸ್ II ಯೋಜನೆಯನ್ನು ಸಾರ್ವಜನಿಕರಿಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸಲು ಹಾಗೂ ಸೈಬರ್ ಸುರಕ್ಷತೆ ಅರಿವು ಮೂಡಿಸಿ ಈ ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರಲು, ಅದರಲ್ಲೂ ಮಹಿಳೆಯರಿಗಾಗಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ರಚಿಸಿದೆ. ಮಹಿಳೆಯರ ಈ ಮಾರ್ಗದರ್ಶಿ ಸೂತ್ರಗಳನ್ನು www.infosecawareness.in ನಿಂದ ಅನುಸರಿಸಿ ಸ್ವತಃ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಮತ್ತು ಇತರ ಮಹಿಳಾ ಸಹೋದ್ಯೋಗಿಗಳ ನಡುವೆ ಈ ಜಾಗೃತಿಯನ್ನು ಹರಡಲು ಭಾಗವಹಿಸಬಹುದು. ನಿಮಗೆ ಸೈಬರ್ ನ ಅರಿವಿರಲಿ ಮತ್ತು ಭಾರತವನ್ನು ಸೈಬರ್ ಅರಿವಿನ ರಾಷ್ಟ್ರವಾಗಿ ಪರಿವರ್ತಿಸಿ.

‘ನೀವು ಸುರಕ್ಷಿತವಾಗಿರಿ ಮತ್ತು ರಾಷ್ಟ್ರವನ್ನು ಸುರಕ್ಷಿತಗೊಳಿಸಿ’

Page Rating (Votes : 9)
Your rating: